AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Babar Azam: 4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್; ವಿಡಿಯೋ ನೋಡಿ

Babar Azam: 4,4,4,4,4… ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್; ವಿಡಿಯೋ ನೋಡಿ

ಪೃಥ್ವಿಶಂಕರ
|

Updated on:Sep 16, 2024 | 3:51 PM

Share

Babar Azam: 50 ಓವರ್‌ಗಳ ಪಂದ್ಯದಲ್ಲಿ ಗೆಲ್ಲಲು 232 ರನ್‌ಗಳ ಗುರಿ ಬೆನ್ನಟ್ಟಿದ ಬಾಬರ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಆರಂಭದಿಂದಲೇ ಮುಕ್ತವಾಗಿ ಆಡಲು ಆರಂಭಿಸಿದರು. ಇದೇ ವೇಳೆ ಎಂಟನೇ ಓವರ್‌ ಬೌಲ್ ಮಾಡಲು ಬಂದ ದಹಾನಿ ಅವರ ವಿರುದ್ಧ ಬಾಬರ್, ಕೊನೆಯ ಐದು ಎಸೆತಗಳನ್ನು ಬೌಂಡರಿಗಟ್ಟಿದರು.

ಅಂತಾರಾಷ್ಟ್ರೀಯ ಸರಣಿಗಳಲ್ಲಿ ತಮ್ಮ ಕಳಪೆ ಪ್ರದರ್ಶನದ ಮೂಲಕ ಅಭಿಮಾನಿಗಳ ಛೀಮಾರಿಗೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟಿಗರು ಇದೀಗ ದೇಶದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಚಾಂಪಿಯನ್ಸ್ ಕಪ್​ನಲ್ಲಿ ತಮ್ಮ ಹಳೆಯ ಫಾರ್ಮ್​ಗೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಈ ಟೂರ್ನಿಯಲ್ಲಿ ಪಾಕ್ ರಾಷ್ಟ್ರೀಯ ತಂಡದ ಆಟಗಾರರಾದ ಬಾಬರ್ ಆಝಂ, ಮೊಹಮ್ಮದ್ ರಿಜ್ವಾನ್, ಶಾಹೀನ್ ಶಾ ಆಫ್ರಿದಿ ಮತ್ತು ಶಾದಾಬ್ ಖಾನ್ ಅವರಂತಹ ಅನೇಕ ಸ್ಟಾರ್ ಆಟಗಾರರು ಆಡುತ್ತಿದ್ದಾರೆ. ಇನ್ನು ನಿನ್ನೆ ನಡೆದ ಸ್ಟಾಲಿಯನ್ಸ್ ಮತ್ತು ಮಾರ್ಖೋರ್ಸ್ ತಂಡಗಳ ನಡುವಿನ ರೋಚಕ ಪಂದ್ಯದಲ್ಲಿ ಬಾಬರ್ ಆಝಂ, ಯುವ ವೇಗಿ ಶಹನವಾಜ್ ದಹಾನಿ ಬೌಲ್ ಮಾಡಿದ ಓವರ್​ನಲ್ಲಿ ಸತತ ಐದು ಬೌಂಡರಿಗಳನ್ನು ಬಾರಿಸಿದರು.

ಸತತ ಐದು ಬೌಂಡರಿಗಳು

50 ಓವರ್‌ಗಳ ಪಂದ್ಯದಲ್ಲಿ ಗೆಲ್ಲಲು 232 ರನ್‌ಗಳ ಗುರಿ ಬೆನ್ನಟ್ಟಿದ ಸ್ಟಾಲಿಯನ್ಸ್ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಬಾಬರ್, ಆರಂಭದಿಂದಲೇ ಮುಕ್ತವಾಗಿ ಆಡಲು ಆರಂಭಿಸಿದರು. ಇದೇ ವೇಳೆ ಎಂಟನೇ ಓವರ್‌ ಬೌಲ್ ಮಾಡಲು ಬಂದ ದಹಾನಿ ಅವರ ವಿರುದ್ಧ ಬಾಬರ್, ಕೊನೆಯ ಐದು ಎಸೆತಗಳನ್ನು ಬೌಂಡರಿಗಟ್ಟಿದರು. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

45 ಎಸೆತಗಳಲ್ಲಿ 45 ರನ್

8ನೇ ಓವರ್​ನಲ್ಲಿ ಬಾಬರ್ ಸತತ ಐದು ಬಾಂಡರಿ ಬಾರಿಸಿದ ಹೊರತಾಗಿಯೂ ಅವರ ಸ್ಟ್ರೈಕ್ ರೇಟ್​ನಲ್ಲಿ ಯಾವುದೇ ಹೆಚ್ಚಳ ಕಂಡುಬರಲಿಲ್ಲ. ಈ ಪಂದ್ಯದಲ್ಲಿ 45 ಎಸೆತಗಳನ್ನು ಎದುರಿಸಿದ ಬಾಬರ್, ಎಂಟು ಬೌಂಡರಿಗಳ ನೆರವಿನಿಂದ 45 ರನ್ ಗಳಿಸಿ ಔಟಾದರು. ಬಾಬರ್ ಕ್ರೀಸ್‌ನಲ್ಲಿರುವವರೆಗೂ, ಸ್ಟಾಲಿಯನ್ಸ್ ತಂಡ ಪಂದ್ಯವನ್ನು ಗೆಲ್ಲುವ ಹಾದಿಯಲ್ಲಿತ್ತು. ಆದರೆ ಬಾಬರ್ ವಿಕೆಟ್ ಪತನದ ಬಳಿಕ ಪಂದ್ಯದ ಚಿತ್ರಣವೇ ಬದಲಾಯಿತು. ಲೆಗ್ ಸ್ಪಿನ್ನರ್ ಜಾಹಿದ್ ಮಹಮೂದ್ ಅವರ ಎಸೆತದಲ್ಲಿ ಪುಲ್ ಶಾಟ್ ಆಡುವ ಪ್ರಯತ್ನದಲ್ಲಿ ಬಾಬರ್ ಔಟಾದರು.

ಬಾಬರ್ ತಂಡಕ್ಕೆ ಸೋಲು

ಬಾಬರ್ ಆಝಂ ಔಟಾದಾಗ ತಂಡದ ಸ್ಕೋರ್ 23.4 ಓವರ್‌ಗಳಲ್ಲಿ 105 ರನ್ ಆಗಿತ್ತು. ಆದರೆ ಇಲ್ಲಿಂದ 8.4 ಓವರ್‌ಗಳ ಅವಧಿಯಲ್ಲಿ ಸ್ಟಾಲಿಯನ್ಸ್ ತಂಡ ಕೇವಲ 26 ರನ್‌ಗಳಿಗೆ ಕೊನೆಯ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿತು. ಎರಡು ಪಂದ್ಯಗಳಲ್ಲಿ 60.50 ಸರಾಸರಿಯಲ್ಲಿ 121 ರನ್ ಗಳಿಸಿರುವ ಬಾಬರ್ ಪ್ರಸ್ತುತ ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 16, 2024 03:49 PM