ಚಂದನ್ ಶೆಟ್ಟಿ, ನಿವೇದಿತಾ ಗೌಡ ಜೋಡಿಯಾಗಿ ನಟಿಸುತ್ತಿದ್ದ ಚಿತ್ರದ ನಿರ್ದೇಶಕ ಹೇಳೋದೇನು?
‘ಕ್ಯಾಂಡಿ ಕ್ರಶ್’ ಚಿತ್ರದಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೊತೆಯಾಗಿ ನಟಿಸುತ್ತಿದ್ದರು. ಈ ಕುರಿತು ಸಿನಿಮಾದ ನಿರ್ದೇಶಕ ಪುನೀತ್ ಮಾತನಾಡಿದ್ದಾರೆ. ‘ನನಗೆ ನ್ಯೂಸ್ ನೋಡಿದ ನಂತರವೇ ಈ ವಿಷಯ ಗೊತ್ತಾಗಿದ್ದು. ನಮಗೂ ಸಹ ಶಾಕ್ ಆಯಿತು. ಫೆಬ್ರವರಿ ತಿಂಗಳಿಂದ ಇಲ್ಲಿಯವರೆಗೆ 35 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ. ಚಿತ್ರೀಕರಣಕ್ಕೆ ಅವರಿಬ್ಬರು ಒಟ್ಟಿಗೆ ಬರುತ್ತಿದ್ದರು’ ಎಂದು ಪುನೀತ್ ಹೇಳಿದ್ದಾರೆ.
ಚಂದನ್ ಶೆಟ್ಟಿ, ನಿವೇದಿತಾ ಗೌಡ (Niveditha Gowda) ಏಕಾಏಕಿ ವಿಚ್ಛೇದನ (Divorce) ಘೋಷಿಸಿರುವುದು ಎಲ್ಲರಿಗೂ ಅಚ್ಚರಿ ಆಗಿದೆ. ಅವರಿಬ್ಬರೂ ಪ್ರೀತಿಸಿ ಮದುವೆ ಆದವರು. ನಾಲ್ಕು ವರ್ಷಗಳು ಕಳೆಯುತ್ತಿದ್ದಂತೆಯೇ ಅವರ ದಾಂಪತ್ಯ ಅಂತ್ಯ ಆಗಿದೆ. ಅವರ ಈ ನಿರ್ಧಾರಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಹತ್ತಾರು ಬಗೆಯ ಅಂತೆ-ಕಂತೆಗಳು ಹರಿದಾಡುತ್ತಿವೆ. ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ (Chandan Shetty) ಅವರು ಆಪ್ತವಾಗಿಯೇ ಇರುತ್ತಿದ್ದರು. ಅಷ್ಟೇ ಅಲ್ಲದೇ, ‘ಕ್ಯಾಂಡಿ ಕ್ರಶ್’ ಸಿನಿಮಾದಲ್ಲಿ ಅವರಿಬ್ಬರು ಜೊತೆಯಾಗಿ ನಟಿಸುತ್ತಿದ್ದರು ಕೂಡ. ಈ ಬಗ್ಗೆ ಸಿನಿಮಾದ ನಿರ್ದೇಶಕ ಪುನೀತ್ ಅವರು ಮಾತನಾಡಿದ್ದಾರೆ. ‘ನನಗೆ ಕೂಡ ನ್ಯೂಸ್ ನೋಡಿದ ಮೇಲೆಯೇ ಈ ವಿಚಾರ ಗೊತ್ತಾಗಿದ್ದು. ನಮಗೂ ಶಾಕ್ ಆಯಿತು. ಫೆಬ್ರವರಿಯಿಂದ ಇಲ್ಲಿಯ ತನಕ 35 ದಿನ ಶೂಟಿಂಗ್ ಮಾಡಿದ್ದೇವೆ. ಚಿತ್ರೀಕರಣಕ್ಕೆ ಅವರು ಒಟ್ಟಿಗೆ ಬರುತ್ತಿದ್ದರು. ಅನ್ಯೋನ್ಯವಾಗಿಯೇ ಇರುತ್ತಿದ್ದರು. ಈಗ ಅದನ್ನೆಲ್ಲ ನೆನಪಿಸಿಕೊಂಡರೆ ಯಾಕೆ ಹೀಗೆ ಆಯ್ತು ಅಂತ ಬೇಸರ ಆಗುತ್ತೆ. ನಮ್ಮ ಸಿನಿಮಾದ ಕಥೆಗೆ ಸ್ಟಾರ್ ಕಪಲ್ ಬೇಕಿತ್ತು. ಆಗ ಅವರೇ ನನಪಿಗೆ ಬಂದಿತ್ತು. ಅವರನ್ನು ಕೇಳಿದಾಗ ಒಪ್ಪಿಕೊಂಡಿದ್ದರು’ ಎಂದಿದ್ದಾರೆ ‘ಕ್ಯಾಂಡಿ ಕ್ರಶ್’ ಸಿನಿಮಾ ನಿರ್ದೇಶಕ ಪುನೀತ್. ಕಾನೂನಿನ ತೊಡಕು ಉಂಟಾಗಿರುವುದರಿಂದ ಈ ಸಿನಿಮಾದ ಶೀರ್ಷಿಕೆ ಬದಲಾಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.