ಮೋದಿ ಪ್ರಮಾಣವಚನ ಸ್ವೀಕಾರಕ್ಕೆ ಭರ್ಜರಿ ಸಿದ್ಧತೆ! ಇಲ್ಲಿದೆ ವಿಡಿಯೋ
ಮೊರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ(Narendra Modi) ಅವರು ಸಂಜೆ 7.15ಕ್ಕೆ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದು, ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ವೇಳೆ ಕೇಂದ್ರ ಸಚಿವರಾಗಿ 68 ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಾಲಿವುಡ್ ನಟರು ಹಾಗೂ ಉದ್ಯಮಿಗಳು ಭಾಗಿಯಾಗಿದ್ದಾರೆ.
ನವದೆಹಲಿ, ಜೂ.09: ಮೊರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ(Narendra Modi) ಅವರು ಸಂಜೆ 7.15ಕ್ಕೆ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದು, ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ವೇಳೆ ಕೇಂದ್ರ ಸಚಿವರಾಗಿ 68 ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉತ್ತರ ಪ್ರದೇಶ, ಬಿಹಾರದಿಂದ ತಲಾ 8 ಸಂಸದರಿಗೆ, ಮಹಾರಾಷ್ಟ್ರದ 6, ಗುಜರಾತ್ನ ಐವರು, ಆಂಧ್ರ ಪ್ರದೇಶದ ಮೂವರು, ಪಶ್ಚಿಮ ಬಂಗಾಳ, ತೆಲಂಗಾಣದ ತಲಾ ಇಬ್ಬರು, ಕರ್ನಾಟಕದ ಐವರು ಸಂಸದರು ಹಾಗೂ ಕೇರಳದಲ್ಲಿ ಗೆದ್ದ ಓರ್ವ ಬಿಜೆಪಿ ಸಂಸದನಿಗೆ ಸಚಿವ ಸ್ಥಾನ ಒಲಿದಿದೆ. ಈ ಮೂಲಕ ಬಿಜೆಪಿಗೆ 58 ಸಚಿವ ಸ್ಥಾನ, ಜೆಡಿಯು, ಟಿಡಿಪಿಗೆ ತಲಾ 2 ಸ್ಥಾನ, ಎನ್‌ಡಿಎ ಮಿತ್ರ ಪಕ್ಷಗಳಿಗೆ ತಲಾ ಒಂದು ಸಚಿವ ಸ್ಥಾನ ನೀಡಲಾಗಿದೆ.
ಇನ್ನು ಮೊದಲು ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದು, ಮೋದಿ ಬಳಿಕ ರಾಜನಾಥ್ ಸಿಂಗ್
ಬಳಿಕ ಅಮಿತ್ ಶಾ, ಗಡ್ಕರಿ, ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್ ಹಾಗೂ ನಿರ್ಮಲಾ ಸೀತಾರಾಮನ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟರು ಭಾಗಿಯಾಗಿದ್ದು, ಅಕ್ಷಯ್ಕುಮಾರ್, ಶಾರುಖ್ ಖಾನ್, ಅನುಪಮ್ ಖೇರ್ ಮಂಡಿ ಕ್ಷೇತ್ರದ ಸಂಸದೆ, ಬಾಲಿವುಡ್ ನಟಿ ಕಂಗನಾ, ಉದ್ಯಮಿ ಮುಕೇಶ್ ಅಂಬಾನಿ, ಪುತ್ರ ಅನಂತ್ ಅಂಬಾನಿ, ಉದ್ಯಮಿ ಗೌತಮ್ ಅದಾನಿ, ಸೂಪರ್ಸ್ಟಾರ್ ರಜಿನಿಕಾಂತ್ ಭಾಗಿಯಾಗಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ

