ಮೋದಿ ಸರ್ಕಾರದಲ್ಲಿ ಕರ್ನಾಟಕಕ್ಕೆ ಬಂಪರ್, ತಪ್ಪಿದ ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ!

ನರೇಂದ್ರ ಮೋದಿ ಪಟ್ಟಾಭಿಷೇಕಕ್ಕೆ ಕೌಂಟ್‌ಡೌನ್ ಶುರುವಾಗಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ಧೂರಿ ಸಮಾರಂಭ ನಡೆಯಲಿದ್ದು, ಅಂತಿಮ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಪದಗ್ರಹಣ ಮಾಡಲಿದ್ದಾರೆ. ಇಂದು ಸಂಜೆ 7ಗಂಟೆ 15 ನಿಮಿಷಕ್ಕೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು ಮೋದಿ ಜೊತೆಗೆ ಕೇಂದ್ರ ಸಚಿವರಾಗಿ ಕರ್ನಾಟಕದಿಂದ ಐವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಶೋಭಾ ಕರಂದ್ಲಾಜೆ ಹಾಗೂ ವಿ ಸೋಮಣ್ಣ ಅವರಿಗೆ ಮಣೆ ಹಾಕಿರುವುದು ಅಚ್ಚರಿ ಮೂಡಿಸಿದೆ. ಇನ್ನು ಮಂತ್ರಿ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರಗಳು ತಲೆಕೆಳಗಾಗಿವೆ.

ಮೋದಿ ಸರ್ಕಾರದಲ್ಲಿ ಕರ್ನಾಟಕಕ್ಕೆ ಬಂಪರ್, ತಪ್ಪಿದ ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ!
ವಿಜಯೇಂದ್ರ, ಯಡಿಯೂರಪ್ಪ
Follow us
|

Updated on:Jun 09, 2024 | 6:59 PM

ನವದೆಹಲಿ/ಬೆಂಗಳೂರು, (ಜೂನ್ 07): ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಎನ್‌ಡಿಎ ಅಧಿಕಾರ ಬರುವುದಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ. ಮೋದಿ ಹಾಗೂ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು. ಕರ್ನಾಟಕದಿಂದ ಐವರಿಗೆ ಅಧಿಕಾರ ದೊರಕುವುದು ಖಚಿತವಾಗಿದೆ. ಅದರಲ್ಲಿ ಈ ಹಿಂದಿನ ಸರ್ಕಾರದಲ್ಲಿ ಕರ್ನಾಟಕದಿಂದ ಮಂತ್ರಿಗಳಾಗಿ ನಿರ್ಮಲಾ ಸೀತಾರಾಮನ್‌, ಪ್ರಲ್ಜಾದ ಜೋಶಿ, ಶೋಭಾ ಕರಂದ್ಲಾಜೆ ಮತ್ತೊಂದು ಬಾರಿ ಅವಕಾಶ ಪಡೆದುಕೊಂಡಿದ್ಧಾರೆ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಮಿತ್ರ ಪಕ್ಷ ಜೆಡಿಎಸ್‌ ಕೋಟಾದಲ್ಲಿ ಸಚಿವರಾದರೆ, ಮಾಜಿ ಸಚಿವ ಹಾಗೂ ತುಮಕೂರು ಕ್ಷೇತ್ರದಿಂದ ಸಂಸದರಾಗಿರುವ ವಿ.ಸೋಮಣ್ಣ ಅವರು ಕೇಂದ್ರದಲ್ಲಿ ಮಂತ್ರಿಯಾಗುವುದು ನಿಕ್ಕಿಯಾಗಿದೆ. ಈಗಾಗಲೇ ಎಲ್ಲಾ ಐದು ಮಂದಿಗೆ ಸಿದ್ದರಿರುವಂತೆ ಸೂಚನೆ ನೀಡಲಾಗಿದೆ. ಶೋಭಾ ಕರಂದ್ಲಾಜೆ ಹಾಗೂ ಸೋಮಣ್ಣ ಅವರು ರಾಜ್ಯ ಸಚಿವರಾದರೆ ಇನ್ನು ಮೂವರು ಸಂಪುಟ ದರ್ಜೆ ಸಚಿವರು. ಇನ್ನು ಶೋಭಾ, ಸೋಮಣ್ಣ ಅವರಿಗೆ ಮಣೆ ಹಾಕಿರುವುದು ರಾಜ್ಯ ಬಿಜೆಪಿ ನಾಯಕರ ಅಚ್ಚರಿಗೆ ಕಾರಣವಾಗಿದ್ದು, ಬಿಜೆಪಿ ನಾಯಕರ ಲೆಕ್ಕಾಚಾರ ತಪ್ಪಿದೆ.

ಒಕ್ಕಲಿಗ ಸಮುದಾಯದಲ್ಲಿ ಶೋಭಾ ಕರಂದ್ಲಾಜೆ, ಬ್ರಾಹ್ಮಣ ಸಮುದಾಯದಲ್ಲಿ ಪ್ರಹ್ಲಾದ್ ಜೋಶಿ, ಲಿಂಗಾಯತ ಸಮುದಾಯದಲ್ಲಿ ವಿ. ಸೋಮಣ್ಣ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಉಳಿದಂತೆ ಕರ್ನಾಟಕದ ಪ್ರಾದೇಶಿಕ ಪಕ್ಷವಾಗಿ ಎನ್‌ಡಿಎ ಮೈತ್ರಿಕೂಟ ಸೇರ್ಪಡೆಯಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ (ಒಕ್ಕಲಿಗ ಸಮುದಾಯ) ನೀಡಲಾಗಿದೆ. ಉಳಿದಂತೆ ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕದ ನಾಲ್ವರಿಗೆ ಮೋದಿ ಸಚಿವ ಸಂಪುಟದಲ್ಲಿ ಅವಕಾಶ, ಡಾ. ಮಂಜುನಾಥ್‌ಗೆ ಜಸ್ಟ್ ಮಿಸ್

ತಪ್ಪಿದ ಬಿಜೆಪಿ ನಾಯಕರ ಲೆಕ್ಕಾಚಾರ

ಹೌದು…ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಪೂರ್ಣಬಹುಮತ ಪಡೆದುಕೊಂಡಿಲ್ಲ. ಹೀಗಾಗಿ ಮಿತ್ರಪಕ್ಷಗಳೊಂದಿಗೆ ಮೋದಿ ಎನ್​ಡಿಎ ಮೈತ್ರಿ ನಾಯಕನಾಗಿ ಆಯ್ಕೆಯಾಗಿದ್ದು, ಈ ಬಾರಿ ಎನ್​ಡಿಎ ಮಿತ್ರ ಪಕ್ಷಗಳಿಗೆ ಹೆಚ್ಚು ಕೇಂದ್ರ ಸಚಿವ ಸ್ಥಾನ ಸಿಗಲಿದೆ. ಹೀಗಾಗಿ ಕರ್ನಾಟಕಕ್ಕೆ ಹೆಚ್ಚು ಸಚಿವ ಸ್ಥಾನ ಸಿಗಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಮಂತ್ರಿಗಿರಿ ಲಾಬಿ ನಡೆಸದೆ ಸೈಲೆಂಟ್ ಆಗಿದ್ದರು.

ಪ್ರಭಾನಿ ನಾಯಕರಾಗಿರುವ ಪ್ರಹ್ಲಾದ್ ಜೋಶಿಗೆ ಮಾತ್ರ ಮಂತ್ರಿ ಸ್ಥಾನ ಖಚಿತ ಎಂದು ರಾಜ್ಯ ಬಿಜೆಪಿ ನಾಯಕರು ಭಾವಿಸಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ನಾಯಕರು ಮಂತ್ರಿಗಿರಿಗಾಗಿ ಪ್ರಯತ್ನವನ್ನು ಗಟ್ಟಿಯಾಗಿ ಮಾಡದೇ ಸುಮ್ಮನಿದ್ದರು. ಅದರಲ್ಲೂ ಮುಖ್ಯವಾಗಿ ನಿರ್ಮಲಾ ಸೀತಾರಾಮನ್ ಹಾಗೂ ಶೋಭಾ ಕರಂದ್ಲಾಜೆಗೆ ಮತ್ತೆ ಸಚಿವ ಸ್ಥಾನ ಸಿಗಬಹುದು ಎಂಬ ಊಹಿಸಿರಲಿಲ್ಲ. ಆದ್ರೆ, ಕೊನೆ ಕ್ಷಣದಲ್ಲಿ ಶೋಭಾ, ಕುಮಾರಣ್ಣ, ಸೋಮಣ್ಣ, ಜೋಶಿ, ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದಿಂದ ಸಚಿವ ಸ್ಥಾನ ನೀಡಲಾಗುತ್ತಿದೆ. ಈ ಪೈಕಿ ಸೋಮಣ್ಣ, ಶೋಭಾ ಅವರಿಗೆ ಮಣೆ ಹಾಕಿರುವುದರಿಂದ ರಾಜ್ಯ ನಾಯಕರು ಶಾಕ್ ಆಗಿದ್ದಾರೆ.

ಲಿಂಗಾಯತ ಸಮುದಾಯದ ರೇಸ್ ನಲ್ಲಿ ಹಿರಿಯ ನಾಯಕರಾದ ಜಗದೀಶ್‌ ಶೆಟ್ಟರ್‌ ಹಾಗೂ ಬಸವರಾಜ ಬೊಮ್ಮಾಯಿ, ಪಿಸಿ ಗದ್ದಿ ಗೌಡರ್ ಮುಂಚೂಣಿಯಲ್ಲಿ ಇದ್ದರು. ಮೂವರು ಪ್ರಮುಖ ಸಂಸದರು ಆಕಾಂಕ್ಷಿಗಳಿದರೂ ಸಹ ವಿ.ಸೋಮಣ್ಣ ಅವರಿಗೆ ಹೈಕಮಾಂಡ್‌ ಮಣೆ ಹಾಕಿರುವುದು ಅಚ್ಚರಿಗೆ ಕಾರಣವಾಗಿದೆ. ಬಿಜೆಪಿಗೆ ಸೇರಿ ದಶಕ ಕಳೆದರೂ ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗಿನ ಮುನಿಸಿನಿಂದ ಸೋಮಣ್ಣ ಬೇಸರಕ್ಕೆ ಒಳಗಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೋವಿಂದರಾಜ ನಗರ ಕ್ಷೇತ್ರ ಬಿಟ್ಟು ಮೈಸೂರಿನ ವರುಣಾ ಹಾಗೂ ಚಾಮರಾಜನಗರದಲ್ಲಿ ಸ್ಪರ್ಧಿಸಿ ಸೋತಿದ್ದರು. ಆ ವೇಳೆ ಸೋಮಣ್ಣ ಹಾಗೂ ಬಿಎಸ್​ವೈ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಆದರೆ ಹೈಕಮಾಂಡ್‌ ನಿಮ್ಮ ಕೈಬಿಡುವುದಿಲ್ಲ ಎಂದು ಸೋಮಣ್ಣಗೆ ಅಭಯ ನೀಡಿತ್ತು. ಈಗ ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಟ್ಟು ಕೇಂದ್ರ ಮಂತ್ರ ಸ್ಥಾನವನ್ನು ನೀಡಿದೆ. ಈ ಮೂಲಕ ಸೋಮಣ್ಣ ರಾಜ್ಯ ಸಚಿವರಾಗಿ ಸಂಪುಟ ಸೇರುವುದು ಖಚಿತವಾಗಿದೆ. ಇದರೊಂದಿಗೆ ಬಿಎಸ್ ಯಡಿಯೂರಪ್ಪಗೆ ಹಿನ್ನಡೆಯಾಗಿದೆ.

ಇದನ್ನೂ ಓದಿ: PM Modi Swearing-in Ceremony Live: ನರೇಂದ್ರ ಮೋದಿಗೆ 3ನೇ ಬಾರಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ

ಬಿಎಸ್​ ಯಡಿಯೂರಪ್ಪಗೆ ಹಿನ್ನಡೆ

ಇನ್ನು ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿಎಸ್​ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಗಳಿದ್ದವು. ಅಲ್ಲದೇ ತಮ್ಮ ಪುತ್ರನಿಗೆ ಈ ಬಾರಿ ಕೇಂದ್ರ ಸಚಿವ ಸ್ಥಾನ ನೀಡಬೇಕೆಂದು ಖುದ್ದು ಯಡಿಯೂರಪ್ಪ ಅವರು ಲಾಬಿ ನಡೆಸಿದ್ದರು. ಆದ್ರೆ, ಹೈಕಮಾಂಡ್​ ಯಡಿಯೂರಪ್ಪ ಬೇಡಿಕೆಗೆ ಮನ್ನಣೆ ನೀಡಿಲ್ಲ. ಬದಲಾಗಿ ರಾಜಕೀಯ ವಿರೋಧಿಯಾಗಿರುವ ವಿ ಸೋಮಣ್ಣಗೆ ಹೈಕಮಾಂಡ್​ ಮಣೆ ಹಾಕಿದೆ. ಇದಿರಂದ ಯಡಿಯೂರಪ್ಪ ಕಣ್ಣು ಕೆಂಪಾಗಿಸಿದೆ. ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯ ಟಿಕೆಟ್​ ಹಂಚಿಕೆಯಲ್ಲೂ ಬಿಎಸ್​ವೈ ಮೇಲುಗೈ ಸಾಧಿಸಿದ್ದರು. ವಿರೋಧಗಳ ನಡುವೆಯೂ ಶೋಭಾ ಕರಂದ್ಲಾಜೆಗೆ ಬೆಂಗಳೂರು ಉತ್ತರ ಟಿಕೆಟ್​, ಗೋವಿಂದ ಕಾರಜೋಳ ಅವರಿಗೆ ಚಿತ್ರದುರ್ಗ ಲೋಕಸಭಾ ಟಿಕೆಟ್​ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಆದ್ರೆ, ಮಂತ್ರಿ ಸ್ಥಾನ ವಿಚಾರದಲ್ಲಿ ಬಿಎಸ್​ವೈಗೆ ಹಿನ್ನಡೆಯಾಗಿದೆ.

ದಲಿತ, ಒಬಿಸಿ ಕೋಟಾದ ಸಂಸದರಿಗೆ ನಿರಾಸೆ

ಈ ಬಾರಿ ಸಂಬಂಧಿಗಳಾದ ರಮೇಶ ಜಿಗಜಿಣಗಿ ಹಾಗೂ ಗೋವಿಂದ ಕಾರಜೋಳ ಇಬ್ಬರೂ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ದಲಿತ ಕೋಟದಡಿಯಲ್ಲಿ ಇವರಿಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು ಎನ್ನುವ ಲೆಕ್ಕಾಚಾರವಿತ್ತು. ಆದ್ರೆ, ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿವೆ. ಯಾವೊಬ್ಬ ದಲಿತ ಸಂಸದಗೂ ಸಚಿವ ಸ್ಥಾನ ಸಿಕ್ಕಿಲ್ಲ. ಒಬಿಸಿ ಕೋಟಾದಲ್ಲಿ ಸಚಿವ ಸ್ಥಾನದ ಆಸೆಯಲ್ಲಿ ಇದ್ದ ಕೋಟಾ ಶ್ರೀನಿವಾಸ ಪ್ರಸಾದ್ ಮತ್ತು ಪಿ.ಸಿ. ಮೋಹನ್ ಅವರಿಗೂ ಅದೃಷ್ಟ ಒಲಿದಿಲ್ಲ.

ಮೋದಿ 3.0 ಸರ್ಕಾರದಲ್ಲಿ ಹಳೇ ಮೈಸೂರು ಭಾಗಕ್ಕೆ ಬಿಜೆಪಿ ಹೈಕಮಾಂಡ್ ಮೂರು ಸಚಿವ ಸ್ಥಾನ ನೀಡಲಾಗಿದೆ. ಹಳೇ ಮೈಸೂರು ಭಾಗದ 11 ಲೋಕಸಭಾ ಕ್ಷೇತ್ರಗಳಲ್ಲಿ 9 ಕಡೆ ದೋಸ್ತಿ ಪಕ್ಷಗಳಿಗೆ ಜಯಭೇರಿ ಸಿಕ್ಕಿದೆ. ಹೀಗಾಗಿ ಈ ಭಾಗಕ್ಕೆ ಎಚ್‌ಡಿಕೆ ಸೇರಿ ಮೂವರಿಗೆ ಸಚಿವ ಸ್ಥಾನ ಸಿಕ್ಕಿದೆ. ಇದರ ಹೊರತಾಗಿ ಕಿತ್ತೂರು ಕರ್ನಾಟಕಕ್ಕೆ ಒಂದು ಸಚಿವ ಸ್ಥಾನ ಅಂದ್ರೆ ಧಾರವಾಡ ಸಂಸದ ಪ್ರಹ್ಲಾದ್ ಜೋಶಿಗೆ ಮತ್ತೆ ಮಂತ್ರಿಭಾಗ್ಯ ಲಭಿಸಿದೆ. ಎರಡನೇ ಹಂತದಲ್ಲಿ ಇತರರಿಗೆ ಸಚಿವ‌ ಸ್ಥಾನ ಸಿಗುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:40 pm, Sun, 9 June 24

ತಾಜಾ ಸುದ್ದಿ
Horoscope: ಈ ರಾಶಿಯವರಿಗೆ ಇಂದು ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ
Horoscope: ಈ ರಾಶಿಯವರಿಗೆ ಇಂದು ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ
ಹನುಮಂತನಿಗೆ ವೀಳ್ಯದೆಲೆ ಮಾಲೆ ಧಾರಣೆಯ ಮಹತ್ವವೇನು?
ಹನುಮಂತನಿಗೆ ವೀಳ್ಯದೆಲೆ ಮಾಲೆ ಧಾರಣೆಯ ಮಹತ್ವವೇನು?
ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್
ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್
ಡಿಎನ್​ಎ ಟೆಸ್ಟ್​ ಮಾಡಿಸಲು ಆಸ್ಪತ್ರೆಗೆ ತೆರಳುವಾಗಿ ಟೆನ್ಷನ್​ ಆದ ಪವಿತ್ರಾ
ಡಿಎನ್​ಎ ಟೆಸ್ಟ್​ ಮಾಡಿಸಲು ಆಸ್ಪತ್ರೆಗೆ ತೆರಳುವಾಗಿ ಟೆನ್ಷನ್​ ಆದ ಪವಿತ್ರಾ
ಡಿಕೆ ಶಿವಕುಮಾರ್​ ಸಭೆಗೂ ಕೈಕೊಟ್ಟ ವಿದ್ಯುತ್: ಅಧಿಕಾರಿಗಳ ಸರ್ಕಸ್ ನೋಡಿ
ಡಿಕೆ ಶಿವಕುಮಾರ್​ ಸಭೆಗೂ ಕೈಕೊಟ್ಟ ವಿದ್ಯುತ್: ಅಧಿಕಾರಿಗಳ ಸರ್ಕಸ್ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಡಿಕೆ ಶಿವಕುಮಾರ್‌
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಡಿಕೆ ಶಿವಕುಮಾರ್‌
ಕಾಸರಗೋಡಿನಲ್ಲಿ ಕೋಣದ ಆರ್ಭಟಕ್ಕೆ ಮನೆ, ಗೇಟು, ಕಾರು ನಜ್ಜುಗುಜ್ಜು
ಕಾಸರಗೋಡಿನಲ್ಲಿ ಕೋಣದ ಆರ್ಭಟಕ್ಕೆ ಮನೆ, ಗೇಟು, ಕಾರು ನಜ್ಜುಗುಜ್ಜು
ವಿಭಿನ್ನತೆಯಿಂದಲೇ ಜನರ ಮನ ಗೆದ್ದ ಈ ಕೋಳಿಯನ್ನೊಮ್ಮೆ ನೋಡಿ
ವಿಭಿನ್ನತೆಯಿಂದಲೇ ಜನರ ಮನ ಗೆದ್ದ ಈ ಕೋಳಿಯನ್ನೊಮ್ಮೆ ನೋಡಿ