ಡಿವೋರ್ಸ್​ ಪಡೆದು ಕೈ-ಕೈ ಹಿಡಿದುಕೊಂಡು ಹೋದ ವಿವೇದಿತಾ ಗೌಡ, ಚಂದನ್​ ಶೆಟ್ಟಿ

ಡಿವೋರ್ಸ್​ ಪಡೆದು ಕೈ-ಕೈ ಹಿಡಿದುಕೊಂಡು ಹೋದ ವಿವೇದಿತಾ ಗೌಡ, ಚಂದನ್​ ಶೆಟ್ಟಿ

ಮದನ್​ ಕುಮಾರ್​
|

Updated on: Jun 07, 2024 | 10:36 PM

ಗಾಯಕ ಚಂದನ್​ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ಅವರು ತಮ್ಮಿಬ್ಬರ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇಂದು (ಜೂ.7) ಶಾಂತಿನಗರದ ಫ್ಯಾಮಿಲಿ ಕೋರ್ಟ್​ಗೆ ಬಂದಿದ್ದ ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ಅವರು ವಾಪಸ್​ ಹೋಗುವಾಗ ಕೈ-ಕೈ ಹಿಡಿದುಕೊಂಡು ಸಾಗಿದರು. ಈ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ...

ಪ್ರೀತಿಸಿ ಮದುವೆ ಆದ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ (Niveditha Gowda) ಅವರು ಇಂದು (ಜೂನ್​ 7) ವಿಚ್ಛೇದನ ಪಡೆದಿದ್ದು ಎಲ್ಲರಿಗೂ ಶಾಕ್​ ಆಯಿತು. ಬೆಂಗಳೂರಿನ ಶಾಂತಿನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಅವರು ಡಿವೋರ್ಸ್​ (Divorce) ಪಡೆದಿದ್ದಾರೆ. ಈ ಸಲುವಾಗಿ ಕೋರ್ಟ್​ಗೆ ಬಂದಿದ್ದ ಅವರು ವಾಪಸ್​ ತೆರಳುವಾಗ ಕೈ-ಕೈ ಹಿಡಿದು ಸಾಗಿದ್ದು ವಿಶೇಷವಾಗಿತ್ತು. ಅದಕ್ಕೂ ಮುನ್ನ ಕೋರ್ಟ್​ ಹಾಲ್​ನಲ್ಲಿ ಅಕ್ಕಪಕ್ಕ ಕುಳಿತ ಅವರು ನಗುನಗುತ್ತಾ ಕಾಲ ಕಳೆದಿದ್ದರು. ಹಾಗಿದ್ದರೂ ಕೂಡ ಅವರು ವಿಚ್ಛೇದನ ಪಡೆದಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ‘ಬಿಗ್​ ಬಾಸ್​ ಕನ್ನಡ ಸೀಸನ್ 5’ ರಿಯಾಲಿಟಿ ಶೋನಲ್ಲಿ ಮೊದಲ ಬಾರಿಗೆ ಚಂದನ್​ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ ಅವರ ಪರಿಚಯ ಆಗಿತ್ತು. ನಂತರ ಅವರಿಬ್ಬರ ನಡುವೆ ಪ್ರೀತಿ ಮೂಡಿತು. ಈಗ ಡಿವೋರ್ಸ್​ ಪಡೆದುಕೊಂಡು ಅವರು ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.