ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಸಾಲಿನ ಫಾಲ್ಸ್ಗಳಿಗೆ ಜೀವ ಕಳೆ, ನಯನ ಮನೋಹರ ದೃಶ್ಯಗಳು
ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ಜೋರಾಗಿದ್ದು ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಫಾಲ್ಸ್ಗಳಿಗೆ ಜೀವ ಕಳೆ ಬಂದಿದೆ. ಅಲ್ಲಿನ ಫಾಲ್ಸ್ಗಳು ಅಪಾಯದ ಮಟ್ಟ ಮೀರಿ ಹರಿಸುತ್ತಿವೆ. ಹೀಗಾಗಿ ಜಿಲ್ಲಾಢಳಿತ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿದೆ. ಆದರೂ ಪ್ರವಾಸಿಗರು ಕಳ್ಳ ಮಾರ್ಗದಲ್ಲಿ ಪ್ರವೇಶಿಸುತ್ತಿದ್ದಾರೆ.
ಚಿಕ್ಕಮಗಳೂರು, ಜುಲೈ.18: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ಮುಂದುವರಿದಿದೆ (Chikmagalur Rain). ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಭಾರಿ ಮಳೆ ಹಿನ್ನೆಲೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಫಾಲ್ಸ್ಗಳಿಗೆ ಜೀವ ಕಳೆ ಬಂದಿದೆ. ಝರಿ, ಫಾಲ್ಸ್, ಹೊನ್ನಮ್ಮನ ಹಳ್ಳ ಮೈದುಂಬಿ ಹರಿಯುತ್ತಿದೆ. ಹಾಲ್ನೊರೆಯಂತೆ ಉಕ್ಕುತ್ತಿರುವ ಕಲ್ಲು ಬಂಡೆಗಳ ಮೇಲೆ ಝರಿ ಫಾಲ್ಸ್ ಜಲ ವೈಭವ ನೋಡಲು ಎರಡು ಕಣ್ಣು ಸಾಲದು.
ಹೊನ್ನಮ್ಮನ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ. ನಿರ್ಬಂಧದ ನಡುವೆಯೂ ಚೆಕ್ಪೋಸ್ಟ್ ಬಿಟ್ಟು ಅನ್ಯ ಮಾರ್ಗದಲ್ಲಿ ಪ್ರವಾಸಿಗರು ಪ್ರವೇಶ ಮಾಡುತ್ತಿದ್ದಾರೆ. ಅಡ್ಡ ರಸ್ತೆಯಲ್ಲಿ ಮುಳ್ಳಯ್ಯನಗಿರಿ, ದತ್ತಪೀಠ, ಹೊನ್ನಮ್ಮನ ಹಳ್ಳ, ಝರಿ ಫಾಲ್ಸ್ ಗೆ ಭೇಟಿ ನೀಡುತ್ತಿದ್ದಾರೆ. ಇದು ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ತಲೆ ನೋವಾಗಿದೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ