ನಿಖಿಲ್​ನನ್ನು ಜನರು ಅಭಿಮನ್ಯು ಮಾಡುವುದಿಲ್ಲ, ಅರ್ಜುನ ಮಾಡುತ್ತಾರೆ ಎಂದ ಹೆಚ್​ಡಿ ಕುಮಾರಸ್ವಾಮಿ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 27, 2024 | 9:12 PM

ಹಾಸನಾಂಬೆ ದರ್ಶನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ವಿರೋಧ ಪಕ್ಷಗಳ ಕುತಂತ್ರಗಳ ಹೊರತಾಗಿಯೂ ಜನರು ನಿಖಿಲ್​ನನ್ನು ಗೆಲ್ಲಿಸುತ್ತಾರೆ ಎಂದು ಹೇಳಿದ್ದಾರೆ. ಚನ್ನಪಟ್ಟಣದ ಜನರು ಅಭಿಮನ್ಯು ಮಾಡುವುದಿಲ್ಲ, ಅರ್ಜುನನ ಪಾತ್ರ ಕೊಡುತ್ತಾರೆ ಎಂದಿದ್ದಾರೆ.

ಹಾಸನ, ಅಕ್ಟೋಬರ್ 27: ಏನೇ ಕುತಂತ್ರ ಮಾಡಿದರೂ ಜನರು ನಿಖಿಲ್​ನನ್ನು ಗೆಲ್ಲಿಸುತ್ತಾರೆ. ಚನ್ನಪಟ್ಟಣ ಜನರು ಅಭಿಮನ್ಯು ಮಾಡುವುದಿಲ್ಲ, ಅರ್ಜುನನ ಪಾತ್ರ ಕೊಡುತ್ತಾರೆ ಎಂದು ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಹಾಸನಾಂಬೆ ದರ್ಶನ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರ ದೇಶದ ಗಮನ ಸೆಳೆಯುವುದನ್ನ ಕಂಡಿದ್ದೇನೆ. ಚನ್ನಪಟ್ಟಣದಲ್ಲಿ ವಿರೋಧಿಗಳು ಕೊಡ್ತಿರುವ ಹೇಳಿಕೆ ಗಮನಿಸಿದ್ದೇನೆ. ಅವರಿಗೆ ಜನರೇ ಉತ್ತರ ಕೊಡುತ್ತಾರೆ. ನನ್ನ ಪುತ್ರನನ್ನು ಮುಗಿಸಲು ಕಾಂಗ್ರೆಸ್​ ನಾಯಕರಿಂದ ಕುತಂತ್ರ ನಡೆದಿದ್ದು, ಅದು ಸಾಧ್ಯವಿಲ್ಲ ಎಂದು ಜನ ತೋರಿಸುತ್ತಾರೆ. ಚನ್ನಪಟ್ಟಣ ಕ್ಷೇತ್ರದಿಂದಲೇ ಅವರ ಅವನತಿ ಆರಂಭವಾಗುತ್ತೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.