ಸ್ವಾರ್ಥದ ರಾಜಕಾರಣಿಗಳನ್ನು ಜಿಲ್ಲೆಯಿಂದ ದೂರವಿಡಲು ಜನ ನನ್ನನ್ನು ಗೆಲ್ಲಿಸಲಿದ್ದಾರೆ: ಯೋಗೇಶ್ವರ್

ಸ್ವಾರ್ಥದ ರಾಜಕಾರಣಿಗಳನ್ನು ಜಿಲ್ಲೆಯಿಂದ ದೂರವಿಡಲು ಜನ ನನ್ನನ್ನು ಗೆಲ್ಲಿಸಲಿದ್ದಾರೆ: ಯೋಗೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 26, 2024 | 3:06 PM

ಬಿಜೆಪಿ ಜೊತೆ ಮೈತ್ರಿ ಬೆಳೆಸಿ ತಮ್ಮ ಪಕ್ಷವನ್ನು ಪುನಶ್ಚೇತನಗೊಳಿಸಿಕೊಳ್ಳುವ ಯೋಚನೆಯನ್ನು ಕುಮಾರಸ್ವಾಮಿಯವರಲ್ಲಿ ಹುಟ್ಟಿಸಿದ್ದೇ ತಾನು ಎಂದ ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಸೇರುವ ದಿನವಷ್ಟೇ ಡಿಕೆ ಶಿವಕುಮಾರ್ ಅವರೊಂದಿಗೆ ಮಾತಾಡಿದ್ದು, ಉಪ ಚುನಾವಣೆಗೆ ಸಂಬಂಧಿಸಿದಂತೆ ಮೊದಲು ಮಾತಾಡಿಲ್ಲ ಎಂದರು.

ರಾಮನಗರ: ಚನ್ನಪಟ್ಟಣದಲ್ಲಿ ಚುನಾವಣಾ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್, ಹತ್ತನೇ ಬಾರಿ ವೋಟು ಕೇಳಲು ಜನರ ಮುಂದೆ ನಿಂತಿದ್ದೇನೆ ಮತ್ತು 5 ಬಾರಿ ಗೆಲ್ಲಿಸಿದ್ದಾರೆ, ರಾಮನಗರ ಜಿಲ್ಲೆ ಮತ್ತು ಚನ್ನಪಟ್ಟಣ ಅಭಿವೃದ್ಧಿಯ ಚಿಂತನೆ ಹೊತ್ತು ಪುನಃ ಕಾಂಗ್ರೆಸ್ ಸೇರಿರುವ ತನ್ನನ್ನು ಜನ ಗೆಲ್ಲಿಸಲಿದ್ದಾರೆ ಎಂದರು. ಸ್ವಾರ್ಥದ ರಾಜಕಾರಣಿಗಳನ್ನು ಜಿಲ್ಲೆಯಿಂದ ದೂರವಿಟ್ಟು ನಿಸ್ವಾರ್ಥ ಮನೋಭಾವದಿಂದ ಜನ ಸೇವೆ ಮಾಡುವ ತನ್ನನ್ನು ಚನ್ನಪಟ್ಟಣದ ಮತದಾರರು ಗೆಲ್ಲಿಸುತ್ತಾರೆಂಬ ಆತ್ಮವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಚನ್ನಪಟ್ಟಣ ಕೈ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಕೆ: ದಳ ಕೋಟೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ