ಚಿಕ್ಕಬಳ್ಳಾಪುರ: 1 ಕೋಟಿ 11 ಲಕ್ಷ ರೂ ಮೌಲ್ಯದ ಕುದುರೆಗೆ ಅದ್ದೂರಿ ಸ್ವಾಗತ
ಓರ್ವ ಉದ್ಯಮಿ ಗುಜರಾತ್‌ನಿಂದ 1.11 ಕೋಟಿ ರೂ ಮೌಲ್ಯದ ಅಪರೂಪದ ಕುದುರೆಯನ್ನು ಚಿಕ್ಕಬಳ್ಳಾಪುರಕ್ಕೆ ತಂದಿದ್ದಾರೆ. ರಾಜಮನೆತನದ ಯುದ್ಧ ಕುದುರೆ ತಳಿಯಾದ ಈ ಕುದುರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ರೆಡ್ ಕಾರ್ಪೆಟ್, ಕೇಕ್ ಕತ್ತರಿಸುವುದು, ಪಟಾಕಿ ಸಿಡಿಸುವ ಮೂಲಕ ಅದ್ಧೂರಿ ಸ್ವಾಗತ ಮಾಡಲಾಗಿದೆ. ಕುದುರೆ ತಳಿ ಅಭಿವೃದ್ಧಿಗಾಗಿ ಈ ಕುದುರೆಯನ್ನು ಖರೀದಿಸಲಾಗಿದೆ ಎಂದು ಉದ್ಯಮಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ, ಜುಲೈ 20: ನಗರದಲ್ಲಿ 1 ಕೋಟಿ 11 ಲಕ್ಷ ರೂ. ಮೌಲ್ಯದ ಮಾರ್ವಾರಿ ತಳಿಯ ಕುದುರೆ (horse) ಗಮನ ಸೆಳೆಯುತ್ತಿದೆ. ಬೆಂಗಳೂರು ಮೂಲದ ಉದ್ಯಮಿ ಷಪೀಕ್ ಎನ್ನುವವರು ಈ ಕುದುರೆ ಖರೀದಿಸಿದ್ದಾರೆ. ರಾಜಮಹಾರಾಜರು ಯುದ್ದದಲ್ಲಿ ಈ ತಳಿಯ ಕುದುರೆ ಬಳಸುತ್ತಿದ್ದರು. ಕುದುರೆಗೆ ರೆಡ್ ಕಾರ್ಪೆಟ್ ಹಾಯಿಸಿ, ಕೆಕ್ ಕತ್ತರಿಸಿ, ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಮಾಡಲಾಗಿದೆ. ಕುದುರೆ ಮೈಕಟ್ಟು, ಅದರ ವೈಯಾರಕ್ಕೆ ಜನರು ಮನಸೋಲುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.