Russell Viper: ಹಾವಿನ ಮರಿಗಳೊಂದಿಗೆ ಪುಟ್ಟ ಪುಟ್ಟ ಮಕ್ಕಳ ಆಟ-ನಲಿದಾಟ, ವಿಡಿಯೋ ವೈರಲ್
ರಸ್ಸೆಲ್ ವೈಫರ್ ಎಂಬ ಹಾವಿನ ಮರಿಯೊಂದಿಗೆ ಮಕ್ಕಳು ಆಟವಾಡುವ ದೃಶ್ಯಗಳು ಜನರನ್ನು ಅಚ್ಚರಿ ಪಡಿಸಿದ್ದು ಹಾವಿನ ಮರಿಯೊಂದಿಗೆ ಮಕ್ಕಳು ಆಟವಾಡ್ತಿರೋ ವಿಡಿಯೋ ವೈರಲ್ ಆಗಿದೆ.
ಕೊಪ್ಪಳ: ಹಾವಿನ ಮರಿಗಳನ್ನು ಕೈಯಲ್ಲಿಡಿದು ಪುಟ್ಟ ಪುಟ್ಟ ಮಕ್ಕಳು ಆಟವಾಡಿದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ಹೊರವಯಲದಲ್ಲಿ ಕಂಡು ಬಂದಿದೆ. ರಸ್ಸೆಲ್ ವೈಫರ್ ಎಂಬ ಹಾವಿನ ಮರಿಯೊಂದಿಗೆ ಮಕ್ಕಳು ಆಟವಾಡುವ ದೃಶ್ಯಗಳು ಜನರನ್ನು ಅಚ್ಚರಿ ಪಡಿಸಿದ್ದು ಹಾವಿನ ಮರಿಯೊಂದಿಗೆ ಮಕ್ಕಳು ಆಟವಾಡ್ತಿರೋ ವಿಡಿಯೋ ವೈರಲ್ ಆಗಿದೆ.
ಕುಷ್ಟಗಿ ಪಟ್ಟಣದ ಹೊರವಲಯದ ಬಳಿ ಹಾವುಗಳು ಕಂಡು ಬಂದಿದ್ವು. ಹಾವು ಕಂಡು ಸ್ಥಳೀಯರು ಉರಗ ರಕ್ಷಕ ಚಾಂದ್ ಪಾಷಾಗೆ ಮಾಹಿತಿ ನೀಡಿದ್ರು. ಆಗ ಸ್ಥಳಕ್ಕೆ ಬಂದ ಚಾಂದ್ ಪಾಷಾ ಎಂಟು ರಸ್ಸೆಲ್ ವೈಪರ್ ಹಾವಿನ ಮರಿ ರಕ್ಷಣೆ ಮಾಡಿದ್ರು. ಎಂಟು ಹಾವಿನ ಮರಿ ಹಾಗೂ ಒಂದು ನಾಗರಹಾವು ರಕ್ಷಣೆ ಮಾಡಿ ಕಾಡಿಗೆ ಬಿಡೋ ವೇಳೆ ಮಕ್ಕಳು ಹಾವಿನ ಮರಿಗಳೊಂದಿಗೆ ಆಟ ಆಡಿದ್ದಾರೆ. ಹಾವಿನ ಮರಿಯೊಂದಿಗೆ ಮಕ್ಕಳು ಆಟ ಆಡೋದನ್ನ ಉರಗ ರಕ್ಷಕ ಚಾಂದ್ ಪಾಷಾ ವಿಡಿಯೋ ಮಾಡಿದ್ದಾರೆ.
Latest Videos