ಭಜನಾ ತಂಡದ ಜೊತೆ ಭಜನೆ ಮಾಡುತ್ತಾ ಪಾದಯಾತ್ರೆ ನಡೆಸಿದ ಶಾಸಕಿ ಅಂಜಲಿ ನಿಂಬಾಳ್ಕರ್
ನಿನ್ನೆ (ಡಿಸೆಂಬರ್ 12) ಮಧ್ಯಾಹ್ನ ಮೂರು ಗಂಟೆಗೆ ಖಾನಾಪುರದಿಂದ ಆರಂಭವಾಗಿದ್ದ ಪಾದಯಾತ್ರೆಯ ನೇತೃತ್ವ ವಹಿಸಿದ ಶಾಸಕಿ ಅಂಜಲಿ ನಿಂಬಾಳ್ಕರ್ ರಾತ್ರಿ ಬೆಳಗಾವಿ ತಾಲೂಕಿನ ಯಳ್ಳೂರಿನಲ್ಲಿ ವಾಸ್ತವ್ಯ ಹೂಡಿದ್ದರು.
ಬೆಳಗಾವಿ: ಸರ್ಕಾರದ ಕಣ್ಣು, ಕಿವಿ ತೆರೆಸಲು ಭಜನೆ ಮಾಡುತ್ತಿದ್ದೇವೆ. ಘೋಷಣೆ ಕೂಗುತ್ತಿದ್ದೇವೆ. ಸರ್ಕಾರ ಯಾರ ಪರವಾಗಿ ಇದೆ ಎನ್ನುವುದನ್ನು ಸ್ಪಷ್ಟಪಡಿಸಲಿ. ಹಾನಿಯಾದ ಬೆಳೆಗೆ ಪರಿಹಾರ ಸಿಕ್ಕಿಲ್ಲ. ಅದನ್ನು ಮೊದಲು ಕೊಡಿ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಭಜನಾ ತಂಡದ ಜೊತೆ ಭಜನೆ ಮಾಡುತ್ತಾ ಪಾದಯಾತ್ರೆ ಮುಂದುವರಿಸಿದ್ದಾರೆ. ಜಿಲ್ಲೆಯ ಜನರು ಕೂಡ ಪಾದಯಾತ್ರೆಗೆ ಸಾಥ್ ನೀಡಿದ್ದು, ಪಾದಯಾತ್ರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕೂಡ ಸಾಥ್ ನೀಡಲಿದ್ದಾರೆ.
ಇಂದಿನಿಂದ ಚಳಿಗಾಲ ಅಧಿವೇಶನ ಆರಂಭ ಹಿನ್ನೆಲೆ ಖಾನಾಪುರ ಕ್ಷೇತ್ರ ಅಭಿವೃದ್ಧಿಗೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿದ್ದು, ಬೆಳಗ್ಗೆ 10ಕ್ಕೆ ಪಾದಯಾತ್ರೆ ಸುವರ್ಣಸೌಧ ತಲುಪಿದೆ. ನಿನ್ನೆ (ಡಿಸೆಂಬರ್ 12) ಮಧ್ಯಾಹ್ನ ಮೂರು ಗಂಟೆಗೆ ಖಾನಾಪುರದಿಂದ ಆರಂಭವಾಗಿದ್ದ ಪಾದಯಾತ್ರೆಯ ನೇತೃತ್ವ ವಹಿಸಿದ ಶಾಸಕಿ ಅಂಜಲಿ ನಿಂಬಾಳ್ಕರ್ ರಾತ್ರಿ ಬೆಳಗಾವಿ ತಾಲೂಕಿನ ಯಳ್ಳೂರಿನಲ್ಲಿ ವಾಸ್ತವ್ಯ ಹೂಡಿದ್ದರು.
ಇದನ್ನೂ ಓದಿ:
ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರ ವಜಾ ಖಂಡಿಸಿ ಮುಂದುವರೆದ ಪಾದಯಾತ್ರೆ; ತುಮಕೂರಿನಿಂದ ಸಿಎಂ ನಿವಾಸದತ್ತ ಹೊರಟ ನೌಕರರು
ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ; ರಾತ್ರೋರಾತ್ರಿ ಮಹಾಮೇಳ ವೇದಿಕೆ ನಿರ್ಮಿಸಿದ ಎಂಇಎಸ್