ಗಡಿರೇಖೆಯುದ್ದಕ್ಕೂ ಪಾಕ್ ಅಪ್ರಚೋದಿತ ಗುಂಡಿನ ದಾಳಿ, ಸುರಕ್ಷಿತ ಸ್ಥಳಕ್ಕೆ ನಾಗರಿಕರ ಸ್ಥಳಾಂತರ

Updated on: May 08, 2025 | 6:52 PM

ಸ್ಥಳಾಂತರಗೊಂಡಿರುವ ಜನರಿಗಾಗಿ ಚಹಾ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಪಾಕ್ ಸೇನೆ ಗಡಿಯುದ್ದಕ್ಕೂ ಕಳೆದ 14 ದಿನಗಳಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವುದರಿಂದ ಈ ಜನರು ಕೆಲದಿನಗಳ ಮಟ್ಟಿಗೆ ಇಲ್ಲೇ ವಾಸ ಮಾಡಬೇಕಾಗಬಹುದು. ಪ್ರಸಕ್ತ ಸ್ಥಿತಿ ಯಾವ ತಿರುವು ಪಡೆದುಕೊಳ್ಳಲಿದೆ ಅಂತ ಊಹಿಸಲು ಸಹ ಕಷ್ಟವಾಗುತ್ತಿದೆ.

ಜಮ್ಮ ಮತ್ತು ಕಾಶ್ಮೀರ, ಮೇ 8: ಭಾರತದ ಸೇನೆಯೊಂದಿಗೆ (Indian Army) ನೇರವಾಗಿ ಯುದ್ಧ ಮಾಡಲಾಗದ ಪಾಕಿಸ್ತಾನದ ಸೇನೆಯು ಗಡಿರೇಖೆಗೆ ಹತ್ತಿರವಿರುವ ಜನವಸತಿ ಪ್ರದೇಶಗಳ ಮೇಲೆ ಗುಂಡಿನ ದಾಳಿ ನಿರಂತರವಾಗಿ ನಡೆಸುತ್ತಿದೆ. ನಾಗರಿಕರ ಜೀವಕ್ಕೆ ಹಾನಿಯಾಗಬಾರದು ಎಂಬ ಉದ್ದೇಶದಿಂದ ಗಡಿಗೆ ಹತ್ತಿರದ ಊರುಗಳ ನಿವಾಸಿಗಳನ್ನು ಸುರಕ್ಷಿತವಾದ ಸ್ಥಳಕ್ಕೆ ರವಾನಿಸುವ ಕೆಲಸವನ್ನು ಭಾರತ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮಾಡುತ್ತಿವೆ. ಜನ ಸುರಕ್ಷಿತ ಸ್ಥಳವೊಂದರಲ್ಲಿ ಬೀಡು ಬಿಟ್ಟಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅವರಲ್ಲಿ ಮಕ್ಕಳು, ಮಹಿಳೆಯರು ವೃದ್ಧರು ಸೇರಿದ್ದಾರೆ. ಕೆಲ ಮಹಿಳೆಯರು ಗುಂಪುಗೂಡಿ ದೇವರನಾಮವನ್ನು ಹಾಡುತ್ತಿದ್ದಾರೆ.

ಇದನ್ನೂ ಓದಿ:  ಪಾಕ್ ಸೇನೆಯಿಂದ ಮುಂದುವರಿದ ಅಪ್ರಚೋದಿತ ಗುಂಡಿನ ದಾಳಿ, ಭಾರತೀಯ ಸೇನೆಯಿಂದ ಪ್ರತ್ಯುತ್ತರ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ