ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ದೆಹಲಿಗೆ ತೆರಳಿ ಸಂಪುಟ ಪುನಾರಚನೆ ವಿಷಯ ಚರ್ಚಿಸಲಿದ್ದಾರೆ: ಪ್ರಿಯಾಂಕ್ ಖರ್ಗೆ

Updated on: Apr 01, 2025 | 12:28 PM

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಉತ್ತರ ಕರ್ನಾಟಕದವರೊಬ್ಬರನ್ನು ಪರಿಗಣಿಸುವ ಸಾಧ್ಯತೆಯ ಬಗ್ಗೆ ಹೇಳಿದ ಪ್ರಿಯಾಂಕ್ ಖರ್ಗೆ, ಅದೆಲ್ಲ ಊಹಾಪೋಹದ ವಿಚಾರ ಮತ್ತು ಕೇವಲ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿರುವ ಸಂಗತಿ, ದೆಹಲಿಯ ಇಂದಿರಾ ಭವನದಲ್ಲಿ ಮತ್ತು 10 ಜನಪಥ್​ನಲ್ಲಿ ಅದು ಚರ್ಚೆಯಾಗುತ್ತಿಲ್ಲ, ಬಿಹಾರ ಚುನಾವಣೆ ಮತ್ತು ಇತರ ರಾಷ್ಟ್ರೀಯ ವಿಷಯಗಳ ಬಗ್ಗೆ ಮಾತ್ರ ಚರ್ಚೆ ಯಾಗುತ್ತಿದೆ ಎಂದರು.

ಬೆಂಗಳೂರು, ಏಪ್ರಿಲ್ 1: ಸಂಪುಟ ಪುನಾರಚನೆ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಇಲ್ಲ. ಡಿಕೆ ಶಿವಕುಮಾರ್ (DK Shivakumar) ಅವರ ಮನೆ ಮುಂದೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ನಾಳೆನಾಡಿದ್ದರಲ್ಲಿ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ದೆಹಲಿಗೆ ಹೋಗುತ್ತಿದ್ದಾರೆ, ಎಂಎಲ್​ಸಿ, ನಾಮ ನಿರ್ದೇಶನ ಮತ್ತು ಪಕ್ಷಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಹೈಕಮಾಂಡ್​​ನೊಂದಿಗೆ ಚರ್ಚೆ ಮಾಡಲಿದ್ದಾರೆ, ಇಲ್ಲಿ ಮಾಧ್ಯಮಗಳ ಮುಂದೆ ತಾನು ಮಾತಾಡಿದರೆ ಉಪಯೋಗವಿಲ್ಲ, ಸಂಪುಟ ಪುನಾರಚನೆ ವರಿಷ್ಠರ ತೀರ್ಮಾನಕ್ಕೆ ಬಿಟ್ಟ ವಿಷಯವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:  ಸಂಪುಟ ಪುನಾರಚನೆ; ಕ್ಷೇತ್ರಗಳಲ್ಲಿ ಕೆಲಸ ಮಾಡುವ ರಿಸಲ್ಟ್ ಓರಿಯೆಂಟೆಡ್ ಮುಖಂಡರಿಗೆ ಅವಕಾಶ ಸಿಗಲಿದೆ: ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ