ಜನಾಕ್ರೋಶ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ, ಮೊಸರಿನ ದರ ಇಳಿಕೆಗೆ ಸಿಎಂ ಸೂಚನೆ

Updated on: Nov 02, 2026 | 9:39 PM

ಕರ್ನಾಟಕದಲ್ಲಿ ನಂದಿನಿ ಹಾಲು, ಮೊಸರಿನ ದರ ಏರಿಕೆಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ನಂದಿನ ಹಾಲಿನ ದರ ಲೀಟರ್​​​ಗೆ 8 ರೂ. ಏರಿಕೆ ಮಾಡಿದೆ. ಈ 8 ರೂಪಾಯಿ ಪೈಕಿ 7 ರೂ. ರೈತರಿಗೆ 1 ರೂ.ಕೆಎಂಎಫ್​​​ಗೆ ಓಕೆ. ಆದ್ರೆ, ಮೊಸರು ಲೀಟರ್​​​ಗೆ 14 ರೂಪಾಯಿ ಹೆಚ್ಚಿಸಿದ್ಯಾಕೆ? ಈ ಹಣ ರೈತರಿಗೆ ಹೋಗುತ್ತಾ ಎಂದು ಪ್ರಶ್ನೆಗಳು ಉದ್ಭವಿಸಿವೆ. ಈ ಬಗ್ಗೆ ಸಾಮಾಜಿ ಜಾಲತಾಣಗಳಲ್ಲಿ ಭಾರೀ ಚರ್ಚೆ ಆಗುತ್ತಿದವೆ. ಇದರ ಬೆನ್ನಲ್ಲೇ ಎಚ್ಚೆತ್ತ ಸಿಎಂ ಡಿಕೆ ಶಿವಕುಮಾರ್, ಏರಿಕೆ ಮಾಡಲಾಗಿದ್ದ ಮೊಸರಿ ಬೆಲೆಯಲ್ಲಿ ಎರಡು ರೂ. ಇಳಿಕೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು, ನವೆಂಬರ್ 2: ಕರ್ನಾಟಕದಲ್ಲಿ ನಂದಿನಿ ಹಾಲು, ಮೊಸರಿನ ದರ ಏರಿಕೆಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ನಂದಿನ ಹಾಲಿನ ದರ ಲೀಟರ್​​​ಗೆ 8 ರೂ. ಏರಿಕೆ ಮಾಡಿದೆ. ಈ 8 ರೂಪಾಯಿ ಪೈಕಿ 7 ರೂ. ರೈತರಿಗೆ 1 ರೂ.ಕೆಎಂಎಫ್​​​ಗೆ ಓಕೆ. ಆದ್ರೆ, ಮೊಸರು ಲೀಟರ್​​​ಗೆ 14 ರೂಪಾಯಿ ಹೆಚ್ಚಿಸಿದ್ಯಾಕೆ? ಈ ಹಣ ರೈತರಿಗೆ ಹೋಗುತ್ತಾ ಎಂದು ಪ್ರಶ್ನೆಗಳು ಉದ್ಭವಿಸಿವೆ. ಈ ಬಗ್ಗೆ ಸಾಮಾಜಿ ಜಾಲತಾಣಗಳಲ್ಲಿ ಭಾರೀ ಚರ್ಚೆ ಆಗುತ್ತಿದವೆ. ಇದರ ಬೆನ್ನಲ್ಲೇ ಎಚ್ಚೆತ್ತ ಸಿಎಂ ಡಿಕೆ ಶಿವಕುಮಾರ್, ಏರಿಕೆ ಮಾಡಲಾಗಿದ್ದ ಮೊಸರಿ ಬೆಲೆಯಲ್ಲಿ ಎರಡು ರೂ. ಇಳಿಕೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಸಂಬಂಧ ಇಂದು (ನವೆಂಬರ್ 02) ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್,ಹಾಲಿನ ದರದ 8 ರೂ. ಪೈಕಿ 7 ರೂ. ರೈತರಿಗೆ ಕೊಡುತ್ತಿದ್ದೇವೆ. ಮೊಸರು ದರ ಕಡಿಮೆ ಮಾಡುವುದಕ್ಕೆ ಹೇಳಿದ್ದೇನೆ. ನೀರಿನ ಬಾಟಲಿ ದರ ಹೆಚ್ಚಾದಾಗ ಒಬ್ಬರೂ ಮಾತಾಡಿಲ್ಲ. ಯಾಕಂದ್ರೆ ಆ ಹಣ ಕೇಂದ್ರ ಸರ್ಕಾರಕ್ಕೆ ಹೋಗುತ್ತಲ್ವಾ? ಎಂದು ಪ್ರಶ್ನಿಸಿದ್ದು, ಮೊಸರಿನ ಬೆಲೆ ಒಂದೆರಡು ರೂಪಾಯಿ ಇಳಿಸೋದಕ್ಕೆ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದರೊಂದಿಗೆ ಲೀಟರ್ ಮೊಸರಿಗೆ 14 ರೂ. ಹೆಚ್ಚಿಸಿದ್ದನ್ನು 12 ರೂ.ಗೆ ಇಳಕೆ ಮಾಡಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 02, 2026 08:27 PM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More