AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ಕೆಟ್​ನಲ್ಲಿ ಮಹಿಳಾ ವ್ಯಾಪಾರಿಗಳ ಜೊತೆ ಸಿಎಂ ಡಿಕೆಶಿ ಖುಷಿ ಮಾತು!

ಮಾರ್ಕೆಟ್​ನಲ್ಲಿ ಮಹಿಳಾ ವ್ಯಾಪಾರಿಗಳ ಜೊತೆ ಸಿಎಂ ಡಿಕೆಶಿ ಖುಷಿ ಮಾತು!

ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Sep 08, 2026 | 11:49 AM

Share

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ವರ್ತಕರು ಮತ್ತು ರೈತರೊಂದಿಗೆ ಸಂವಾದ ನಡೆಸಿದರು. ಬಾಡಿಗೆ ಮನೆ, ವಿದ್ಯುತ್ ಶುಲ್ಕ ಹಾಗೂ ಗೃಹಲಕ್ಷ್ಮಿ ಯೋಜನೆಯ ಕುರಿತು ಚರ್ಚಿಸಿದರು. ಬಹುಕಾಲದಿಂದ ವಸತಿಗಾಗಿ ಇರುವ ಬೇಡಿಕೆ, ಕೃಷಿ ಸಚಿವರ ಅನುಪಸ್ಥಿತಿಯ ಬಗ್ಗೆ ವರ್ತಕರು ಮತ್ತು ರೈತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಬೆಂಗಳೂರು, ಸೆಪ್ಟೆಂಬರ್ 08: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ವರ್ತಕರು ಮತ್ತು ರೈತರೊಂದಿಗೆ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು. ಈರುಳ್ಳಿ ಮಾರುಕಟ್ಟೆಯಲ್ಲಿ ಮಹಿಳಾ ವ್ಯಾಪಾರಿಗಳೊಂದಿಗೆ ಬೆರೆತ ಸಿಎಂ, ಅವರ ವೈಯಕ್ತಿಕ ಸ್ಥಿತಿಗತಿಗಳು ಮತ್ತು ಸರ್ಕಾರಿ ಯೋಜನೆಗಳ ಕುರಿತು ವಿಚಾರಿಸಿದರು.

ವ್ಯಾಪಾರಿಗಳ ಜೀವನೋಪಾಯದ ಬಗ್ಗೆ ಪ್ರಶ್ನಿಸಿದಾಗ, ಬಹುತೇಕರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ತಿಂಗಳಿಗೆ 5000 ರೂಪಾಯಿ ಬಾಡಿಗೆ ಪಾವತಿಸುತ್ತಿರುವುದಾಗಿ ತಿಳಿಸಿದರು. ವಿದ್ಯುತ್ ಬಿಲ್ ಬಗ್ಗೆ ಕೇಳಿದಾಗ, ಕಾಂಗ್ರೆಸ್ ಸರ್ಕಾರದ ಉಚಿತ ವಿದ್ಯುತ್ ಯೋಜನೆ ತಮ್ಮ ಹೊರೆ ಕಡಿಮೆ ಮಾಡಿದೆ ಎಂದು ಕೆಲವರು ಒಪ್ಪಿಕೊಂಡರು. ಅಲ್ಲದೆ, ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ತಲುಪಿದೆಯೇ ಎಂದು ಸಿಎಂ ಕೇಳಿದಾಗ, ಕೆಲವು ಕುಟುಂಬಗಳಿಗೆ ತಲುಪಿಲ್ಲ ಎಂದು ವರ್ತಕರು ಮಾಹಿತಿ ನೀಡಿದರು. 25 ವರ್ಷಗಳಿಂದ ವಸತಿ ಸೌಲಭ್ಯಕ್ಕಾಗಿ ಮನವಿ ಮಾಡುತ್ತಿದ್ದರೂ ಯಾವುದೇ ಸರ್ಕಾರ ಸ್ಪಂದಿಸಿಲ್ಲ ಎಂದು ವರ್ತಕರು ತಮ್ಮ ಅಳಲನ್ನು ತೋಡಿಕೊಂಡರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 08, 2026 11:38 AM

Follow Us