ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಬಾರದು, ಎಲ್ಲರಿಗೂ ಸರಿಸಮಾನವಾಗಿ ಹಂಚಬೇಕು: ಸಿಎನ್ ಬಾಲಕೃಷ್ಣ
ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ ಮತ್ತು ಜೀವಾವಧಿ ಶಿಕ್ಷೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಬಾಲಕೃಷ್ಣ, ಜನಪ್ರತಿನಿಧಿಗಳ ಕೋರ್ಟ್ ಅವರಿಗೆ ಶಿಕ್ಷೆ ವಿಧಿಸಿದೆ, ನ್ಯಾಯಾಲಯದ ತೀರ್ಪನ್ನು ಯಾರೂ ಪ್ರಶ್ನಿಸುವಂತಿಲ್ಲ, ಅದರೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ ಎಂದು ಹೇಳಲಾಗುತ್ತಿದೆ, ಕುಟುಂಬದವರು ಕಾನೂನು ಹೋರಾಟ ಮುಂದುವರಸುವ ಬಗ್ಗೆ ಚರ್ಚೆ ಮಾಡಿರುವಂತಿದೆ ಎಂದು ಹೇಳಿದರು.
ಹಾಸನ, ಆಗಸ್ಟ್ 8: ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶ್ರವಣಬೆಳಗೊಳದ ಜೆಡಿಎಸ್ ಶಾಸಕ ಸಿಎನ್ ಬಾಲಕೃಷ್ಣ ಅನುದಾನ ಬಿಡುಗಡೆ ಅಥವಾ ಬೇರೆ ಯಾವುದರಲ್ಲೇ ಆಗಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಅಂತ ತಾರತಮ್ಯ ಆಗಬಾರದು ಎಂದರು. ಮುಖ್ಯಮಂತ್ರಿಯವರು (chief minister) ಮೊದಲು ತಮ್ಮ ಶಾಸಕರಿಗೆ ತಲಾ 25 ಕೋಟೊ ರೂ. ಬಿಡುಗಡೆ ಮಾಡಿದರು, ಬೇರೆಯವರಿಗೆ ಏನೂ ಮಾಡಲಿಲ್ಲ, ನಂತರ ವಿಪಕ್ಷ ಶಾಸಕರಿಗೆ ಹತ್ತತ್ತು ಕೋಟಿ ಬಿಡುಗಡೆ ಮಾಡಿದಾಗ ಕಾಂಗ್ರೆಸ್ ಶಾಸಕರಿಗೂ ತಲಾ ಹತ್ತು ಕೋಟಿ ನೀಡಿದರು. ಆದರೆ ಈ ಹಣ ಸ್ಯಾಂಕ್ಷನ್ ಆಗಿದೆ ಮತ್ತು ಕಾಮಗಾರಿಗಳು ಪೂರ್ಣಗೊಂಡಿವೆ ಅದರೆ ಹಣವಿನ್ನೂ ಬಿಡುಗಡೆಯಾಗಿಲ್ಲ ಎಂದು ಬಾಲಕೃಷ್ಣ ಹೇಳಿದರು. ಈಗ ಪುನಃ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಮತ್ತು ಜೆಡಿಎಸ್ ಹಾಗೂ ಬಿಜೆಪಿ ಶಾಸಕರಿಗೆ ತಲಾ 25 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಅನುದಾನ ಬಿಡುಗಡೆ ಮಾಡಿ ಸಿದ್ದರಾಮಯ್ಯ ಸರ್ಕಾರ ಬಿಜೆಪಿ ಶಾಸಕರಿಗೆ ಉಪಕಾರವೇನೂ ಮಾಡಿಲ್ಲ: ವಿಜಯೇಂದ್ರ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
