ವಾಲ್ಮೀಕಿ ನಿಗಮ ಹಗರಣದ ರಿಕವರಿ ಹಣದ ಬಗ್ಗೆಯಿದ್ದ ಗೊಂದಲ ನಿವಾರಿಸಿದ ಸಿಎಂ ಸಿದ್ದರಾಮಯ್ಯ

|

Updated on: Jul 19, 2024 | 9:06 PM

ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ತೆಲಂಗಾಣಗೆ 89 ಕೋಟಿ ರೂ. ಹೋಗಿದೆ ಮತ್ತು ಅದನ್ನೇ ರಿಕವರಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸದನದಲ್ಲಿ ಹೇಳಿದರು. ಅದೆಲ್ಲ ಸರಿ ಈ ಅವ್ಯವಹಾರದಲ್ಲಿ ಮಾಜಿ ಸಚಿವ ಬಿ ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರ ಪಾತ್ರವೇನು ಅನ್ನೋದು ಇನ್ನೂ ಗೊತ್ತಾಗುತ್ತಿಲ್ಲ.

ಬೆಂಗಳೂರು: ಇವತ್ತಿನ ವಿಧಾನಸಭಾ ಕಾರ್ಯಕಲಾಪಗಳು ಮುಗಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾ ಗೋಷ್ಠಿ ನಡೆಸಿ ಮಾತಾಡುವಾಗ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆಗೊಳಪಡಿಸುವುದು ನಿಶ್ಚಿತ ಎಂದು ಹೇಳಿದರು. ನಿಗಮದ ಹಣ ರಿಕವರಿಯಾಗಿರುವ ಹಣದ ಬಗ್ಗೆ ಉಂಟಾದ ಗೊಂದಲವನ್ನು ಸಿದ್ದರಾಮಯ್ಯ ನಿವಾರಿಸಿದರು. ಅಸಲಿಗೆ ಅವರು ಸದನದಲ್ಲಿ ಹೇಳಿದ್ದಕ್ಕೆ ಮತ್ತು ಪತ್ರಿಕಾ ಗೋಷ್ಠಿಯಲ್ಲಿ ನೀಡಿದ ವಿವರಣೆ ನಡುವೆ ಭಿನ್ನತೆ ಇತ್ತು. ಗೋಷ್ಟಿಯಲ್ಲಿ ಸಿಎಂ ನೀಡಿದ ಮಾಹಿತಿ ಪ್ರಕಾರ 36 ಕೋಟಿ ರೂ. ನಗದು ರಿಕವರಿಯಾಗಿದೆ ಮತ್ತು ಬ್ಯಾಂಕಲ್ಲಿರುವ ₹ 46 ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮದ್ಯದ ಅಂಗಡಿಗಳಿಗೆ ಪಾವತಿ ಆಗಿರುವ ಬಗ್ಗೆ ಕೇಳಿದಾಗ ಅವರು, ಒಟ್ಟು 217 ಖಾತೆಗಳಿವೆ ಮತ್ತು ಅವುಗಳ ಪೈಕಿ ಕೇವಲ 4 ಖಾತೆಗಳಿಂದ ಮಾತ್ರ ಲಿಕ್ಕರ್ ಶಾಪ್​ಗಳಿಗೆ ಮಾತ್ರ ಪೇಮೆಂಟ್ ಆಗಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದ ಎಲ್ಲ ಹಗರಣಗಳನ್ನು ತನಿಖೆಗೆ ಒಪ್ಪಿಸುವೆ: ಸಿದ್ದರಾಮಯ್ಯ

Follow us on