ಆ ಘಟನೆಗಳ ಬಗ್ಗೆ ಕೇಳಿದ್ದಕ್ಕೆ ಕೈ ಮುಗಿದ ‘ಸಂಜು ವೆಡ್ಸ್ ಗೀತಾ 2’ ನಿರ್ದೇಶಕ ನಾಗಶೇಖರ್
ನಟ ದರ್ಶನ್ ಬಂಧನದ ಬಗ್ಗೆ ಕನ್ನಡ ಚಿತ್ರರಂಗದ ಹಲವರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವಿಚಾರವಾಗಿ ನಿರ್ದೇಶಕ ನಾಗಶೇಖರ್ ಅವರಿಗೂ ಪ್ರಶ್ನೆ ಕೇಳಲಾಯಿತು. ಆದರೆ ಅವರು ಪ್ರತಿಕ್ರಿಯಿಸಲು ಇಚ್ಛಿಸಿಲ್ಲ. ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಶೂಟಿಂಗ್ ಸೆಟ್ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಾಗಶೇಖರ್ ಅವರ ವಿಡಿಯೋ ಇಲ್ಲಿದೆ..
ನಿರ್ದೇಶಕ ನಾಗಶೇಖರ್ ಅವರು ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ಸೆಟ್ನಲ್ಲೇ ಸುದ್ದಿಗೋಷ್ಠಿ ನಡೆಸಲಾಗಿದೆ. ಈ ಬಗ್ಗೆ ಅವರು ಒಂದಷ್ಟು ವಿಷಯಗಳ ಬಗ್ಗೆ ಮಾತಾಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆಗಿರುವ ಕುರಿತು ಪ್ರಶ್ನೆ ಎದುರಾಗುವುದಕ್ಕೂ ಮುನ್ನವೇ ನಾಗಶೇಖರ್ ಅವರು ಕೈ ಮುಗಿದು, ‘ಆ ಬೆಳವಣಿಗೆಗಳ ಬಗ್ಗೆ ಮಾತನಾಡುವಷ್ಟು ಎತ್ತರಕ್ಕೆ ನಾನು ಇನ್ನೂ ಬೆಳೆದಿಲ್ಲ. ನಾನು ಚಿಕ್ಕ ವ್ಯಕ್ತಿ’ ಎಂದು ಹೇಳಿದ್ದಾರೆ. ಸ್ಟಾರ್ ಸಿನಿಮಾಗಳ ಕೊರತೆ ಇದೆ ಎಂಬ ಮಾತಿದೆ. ಈ ಬಗ್ಗೆ ನಾಗಶೇಖರ್ ಪ್ರತಿಕ್ರಿಯಿಸಿದ್ದಾರೆ. ‘ಸಿನಿಮಾಗಳಿಂದಲೇ ಎಲ್ಲರೂ ಸ್ಟಾರ್ಗಳಾಗಿರುವುದು. ಚಿತ್ರರಂಗಕ್ಕೆ ಒಳ್ಳೆಯ ಸಿನಿಮಾಗಳು, ಒಳ್ಳೆಯ ನಟರು, ಒಳ್ಳೆಯ ನಿರ್ದೇಶಕರು ಬೇಕು. ಎಲ್ಲರೂ ಸೇರಿ ಒಳ್ಳೆಯ ಸಿನಿಮಾ ಮಾಡಿದರೆ ಖಂಡಿತಾ ಜನರು ನೋಡುತ್ತಾರೆ’ ಎಂದು ನಾಗಶೇಖರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos