ಸಿಕ್ಕಿದ್ದೇ ಚಾನ್ಸ್​​​ ಅಂತ ವೇದಿಕೆ ಮೇಲೆಯೇ ವೇಣುಗೋಪಾಲ್​​ ಜತೆ ಸಿಎಂ ಗುಸು ಗುಸು ಮಾತು

Updated on: Dec 03, 2025 | 3:00 PM

ಮಂಗಳೂರು, (ಡಿಸೆಂಬರ್ 03): ಬ್ರೇಕ್ ಫಾಸ್ಟ್​​​​ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಕುರ್ಚಿ ಕದನ ಕೊಂಚ ತಣ್ಣಗಾದಂತಿದೆ. ಇದರ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯನವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಜೊತೆ ಇಂದು (ಡಿಸೆಂಬರ್ 03) ಉಳ್ಳಾಲದಲ್ಲಿ ನಡೆದ ಗುರು-ಗಾಂಧಿ ಸಂವಾದ ಶತಮಾನೋತ್ಸವದಲ್ಲಿ ವೇದಿಕೆ ಹಂಚಿಕೊಂಡಿದ್ದು, ಈ ವೇಳೆ ಸಿದ್ದರಾಮಯ್ಯ ಹಾಗೂ ವೇಣುಗೋಪಾಲ್ ಅಕ್ಕಪಕ್ಕದಲ್ಲೇ ಕುಳಿತುಕೊಂಡು ಗುಸು ಗುಸು ಮಾತುಕತೆ ನಡೆಸಿರುವುದು ಕಂಡುಬಂದಿದ್ದು, ಸಿದ್ದರಾಮಯ್ಯನವರ ಮಾತಿಗೆ ವೇಣುಗೋಪಾಲ ತಲೆ ಆಡಿಸಿರುವುದು ದೃಶ್ಯದಲ್ಲಿ ಸೆರೆಯಾಗಿದೆ.

ಮಂಗಳೂರು, (ಡಿಸೆಂಬರ್ 03): ಬ್ರೇಕ್ ಫಾಸ್ಟ್​​​​ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ (Siddaramaiah)ಹಾಗೂ ಡಿಸಿಎಂ ಡಿಕೆ ಶಿವಕುಮಾರ್  (DK Shivakumar) ನಡುವಿನ ಕುರ್ಚಿ ಕದನ ಕೊಂಚ ತಣ್ಣಗಾದಂತಿದೆ. ಇದರ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯನವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ (KC Venugopal) ಅವರ ಜೊತೆ ಇಂದು (ಡಿಸೆಂಬರ್ 03) ಉಳ್ಳಾಲದಲ್ಲಿ ನಡೆದ ಗುರು-ಗಾಂಧಿ ಸಂವಾದ ಶತಮಾನೋತ್ಸವದಲ್ಲಿ ವೇದಿಕೆ ಹಂಚಿಕೊಂಡಿದ್ದು, ಈ ವೇಳೆ ಸಿದ್ದರಾಮಯ್ಯ ಹಾಗೂ ವೇಣುಗೋಪಾಲ್ ಅಕ್ಕಪಕ್ಕದಲ್ಲೇ ಕುಳಿತುಕೊಂಡು ಗುಸು ಗುಸು ಮಾತುಕತೆ ನಡೆಸಿರುವುದು ಕಂಡುಬಂದಿದ್ದು, ಸಿದ್ದರಾಮಯ್ಯನವರ ಮಾತಿಗೆ ವೇಣುಗೋಪಾಲ ತಲೆ ಆಡಿಸಿರುವುದು ದೃಶ್ಯದಲ್ಲಿ ಸೆರೆಯಾಗಿದೆ.

ಇದೇ ಸಿಕ್ಕಿದ್ದೇ ಚಾನ್ಸ್​ ಎಂದು ಸಿದ್ದರಾಮ್ಯಯನವರು ವೇಣುಗೋಪಾಲ್ ಅವರಿಗೆ ಪಕ್ಷದಲ್ಲಾಗುತ್ತಿರುವ ವಿದ್ಯಮಾನಗಳ ಬಗ್ಗೆ ವಿವರಿಸಿದರು.  ಅಲ್ಲದೇ ವೇಣುಗೋಪಾಲ ಅವರು ಸಿಎಂಗೆ ಕರೆ ಮಾಡಿ ಬ್ರೇಕ್ ಫಾಸ್ಟ್​ಗೆ ಡಿಕೆ ಶಿವಕುಮಾರ್ ಅವರನ್ನ ಕರೆದು ಮಾತುಕತೆ ಮೂಲಕ ಗೊಂದಲ ಬಗೆಹರಿಸಿಕೊಳ್ಳಿ ಎಂದು ಸೂಚಿಸಿದ್ದರು. ಅದರಂತೆ ಬ್ರೇಕ್​ ಫಾಸ್​​ ಮೀಟಿಂಗ್ ಮಾಡಿದ್ದು, ಅದರ ಮಾಹಿತಿಯನ್ನು ಸಹ ಸಿಎಂ ವೇಣುಗೋಪಾಲ್​​ಗೆ ತಿಳಿಸಿದರು.​

Published on: Dec 03, 2025 02:57 PM