ಚಿತ್ರಕಲಾ ಪರಿಷತ್ ನಲ್ಲಿ ಫೋಟೋ ಪ್ರದರ್ಶನವನ್ನು ನಿರಾಳಭಾವದಿಂದ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

|

Updated on: Aug 19, 2024 | 2:28 PM

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಕ್ರಮದ ವಿರುದ್ಧ ಕಾಂಗ್ರೆಸ್ ನಾಯಕರು ರಾಜ್ಯದಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಕೆಲ ಪ್ರಮುಖ ನಾಯಕರು ಅದರಲ್ಲೂ ವಿಶೇಷವಾಗಿ ಸಲೀಂ ಅಹ್ಮದ್, ಕೃಷ್ಣ ಭೈರೇಗೌಡ ಮತ್ತು ಜಮೀರ್ ಅಹ್ಮದ್ ಖಾನ್ ಅವರು ರಾಜ್ಯಪಾಲ ಬಿಜೆಪಿ ಏಜೆಂಟ್ ನಂತೆ ವರ್ತಿಸುತ್ತಿದ್ದಾರೆ ಎಂದಿದ್ದಾರೆ.

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರಾಳರಾದಂತೆ ಕಾಣುತ್ತಿದೆ. ಇವತ್ತು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಲಾಗಿರುವ ಫೋಟೋ ಪ್ರದರ್ಶನವನ್ನು ಅವರು ನಿರಾಳ ಭಾವದಿಂದ ವೀಕ್ಷಿಸಿದರು. ಬೆಂಗಳೂರಿನ ಫೋಟೋ ಜರ್ನಲಿಸ್ಟ್ ಗಳ ಸಂಘದ ವತಿಯಿಂದ ಪೋಟೋ ಎಕ್ಸಿಬಿಷನ್ ಆಯೋಜಿಸಲಾಗಿದೆ. ಪ್ರತಿಯೊಂದು ಪೋಟೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ಷ್ಮವಾಗಿ ಗಮನಿಸುತ್ತಾ ಆಯಾ ಫೋಟೋದ ವಿವರಣೆಯನ್ನು ಆಸಕ್ತಿಯಿಂದ ಆಲಿಸಿದರು. ಪೋಟೋಗ್ರಾಫರ್ ಗಳು ತಮ್ಮ ಫೋಟೋದ ಮುಂದೆ ಮುಖ್ಯಮಂತ್ರಿ ಮತ್ತು ಇತರ ಗಣ್ಯರು ಬಂದಾಗ ಅದರ ಬಗ್ಗೆ ವಿವರಣೆ ನೀಡುವುದನ್ನು ದೃಶ್ಯಗಳಲ್ಲಿ ಗಮನಿಸಬಹುದು. ತಮಿಳು ನಾಡು ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಎಂಜಿ ರಾಮಚಂದ್ರನ್ ಅವರ ಒಂದು ಹಳೆಯ ಬ್ಲ್ಯಾಕ್ ಅಂಡ್ ವ್ಹೈಟ್ ಫೋಟೋವನ್ನು ಸಿದ್ದರಾಮಯ್ಯ ಕೊಂಚ ಜಾಸ್ತಿ ಹೊತ್ತು ವೀಕ್ಷಿಸಿದ್ದು ಗಮನಾರ್ಹವೆನಿಸಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ‘ಯಾವ ನಾಲಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತಿದ್ದೀರಿ?, ಹಳೆಯದನ್ನೆಲ್ಲ ಒಮ್ಮೆ ನೆನಪಿಸಿಕೊಳ್ಳಿ’ -ಆರ್​ ಅಶೋಕ್​ಗೆ ಸಿದ್ದರಾಮಯ್ಯ ತಿರುಗೇಟು