ಮುಡಾ ಹಗರಣ; ಚೆಂಡು ಈಗ ನ್ಯಾಯಾಲಯದ ಅಂಗಳದಲ್ಲಿದೆ: ಜಿಟಿ ದೇವೇಗೌಡ, ಶಾಸಕ
ಜೆಡಿಎಸ್ ಮತ್ತು ಬಿಜೆಪಿ ನಡುವೆ ಏರ್ಪಟ್ಟಿರುವ ಮೈತ್ರಿಯ ಬಗ್ಗೆ ಮಾತಾಡುವಾಗ ಶಾಸಕ ದೇವೇಗೌಡ ಸಂದಿಗ್ಧತೆ, ಅನಿಶ್ಚಿತತೆ ಪ್ರದರ್ಶಿಸಿದ್ದು ಅಚ್ಚರಿ ಮೂಡಿಸಿತು. ಅಸ್ಥಿರವಾದ ಧ್ವನಿಯಲ್ಲಿ ಅವರು ಎರಡು ಪಕ್ಷಗಳ ನಡುವಿನ ಮೈತ್ರಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಮುಂದುವರಿಯಲಿದೆ ಎನ್ನುತ್ತಾರೆ!
ಮೈಸೂರು: ಹಿರಿಯ ಜೆಡಿಎಸ್ ನಾಯಕ ಮತ್ತು ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಅವರು ಕುಟುಂಬ ಸಮೇತ ನಂಜನಗೂಡಿನಲ್ಲಿರುವ ಶ್ರೀಕಂಠೇಶ್ವರಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಕುಳಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಶ್ರೀಕಂಠೇಶ್ವರಸ್ವಾಮಿಗೆ ಪೂಜೆ ಸಲ್ಲಿಸುವುದು ತಮ್ಮ ಪತ್ನಿಯ ಇಚ್ಛೆಯಾಗಿತ್ತು, ಹಾಗಾಗಿ ಇಲ್ಲಿಗೆ ಬಂದು ದೇವರಿಗೆ ಪೂಜೆ ಸಲ್ಲಿಸಿ ನಾಡಿನ ಸಮಗ್ರ ಜನತೆಗೆ ಒಳ್ಳೆಯದಾಗಲಿ, ರಾಜ್ಯದಲ್ಲಿ ಸುಖ ಶಾಂತಿ ನೆಮ್ಮದಿ ಮತ್ತು ಸಮೃದ್ಧಿ ನೆಲೆಗೊಂಡಿರಲಿ ಎಂದು ಪ್ರಾರ್ಥಿಸಿದ್ದಾಗಿ ಹೇಳಿದರು. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಡೆಸಿದ ಪಾದಯಾತ್ರೆ ಫಲ ನೀಡಿದೆ, ರಾಜ್ಯಪಾಲರು ತಮ್ಮ ಕೆಲಸ ಮಾಡಿದ್ದಾರೆ, ಈಗ ಚೆಂಡು ನ್ಯಾಯಾಲಯದ ಅಂಗಳದಲ್ಲಿದೆ ಎಂದು ದೇವೇಗೌಡ ಹೇಳಿದರು. ಮುಡಾ ಹಗರಣದ ಎಲ್ಲ ತೀರ್ಮಾನಗಳನ್ನು ಇನ್ನು ಮುಂದೆ ನ್ಯಾಯಾಲಯವೇ ತೆಗೆದುಕೊಳ್ಳುತ್ತದೆ ಎಂದು ಶಾಸಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: MUDA Scam: ಪತ್ರಿಕಾ ವರದಿಗಳು ನಿಜವಾಗಿದ್ದರೆ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಜಿಟಿ ದೇವೇಗೌಡ