ಕಾಂಗ್ರೆಸ್ ಕಾರ್ಯಕರ್ತರು ಜಿದ್ದಿಗೆ ಬಿದ್ದಂತೆ ಪಾದಮುಟ್ಟಿ ನಮಸ್ಕರಿಸಲು ಬಂದಾಗ ಸಿದ್ದರಾಮಯ್ಯ ಅಸಹನೆ ಪ್ರದರ್ಶಿಸಿದರು
ಹಾಗೆ ನೋಡಿದರೆ, ಸಿದ್ದರಾಮಯ್ಯನವರಿಗೆ ಪಾದ ಮುಟ್ಟಿಸಿಕೊಳ್ಳುವುದು ಇಷ್ಟವಿಲ್ಲ, ತಾವು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಅದನ್ನು ಹೇಳಿದ್ದರು. ಅದರೂ ಜನ ಗೌರವ ಸಲ್ಲಿಸಲು ಅದನ್ನು ಮಾಡುತ್ತಾರೆ. ಮೊದಲೆಲ್ಲ ಪಾದ ಮುಟ್ಟಲು ಬಂದಾಗ ಬೇಡ ಅಂತ ಹಿಂದೆ ಸರಿಯುತ್ತಿದ್ದ ಸಿದ್ದರಾಮಯ್ಯ ಈಗ ಆಸ್ಪದ ಕೊಡುತ್ತಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಾಡಿನ ಅತ್ಯಂತ ಜನಪ್ರಿಯ ನಾಯಕಲ್ಲಿ ಒಬ್ಬರು ಅದರಲ್ಲಿ ಎರಡು ಮಾತಿಲ್ಲ. ಅಧಿಕಾರದಲ್ಲಿರಲಿ ಬಿಡಲಿ, ಅವರು ಕ್ರೌಡ್ ಪುಲ್ಲರ್. ಮಾಸ್ ಲೀಡರ್ ಗಳ (mass leaders) ವೈಶಿಷ್ಟ್ಯತೆಯೇ ಅದು. ಜನ ಅವರನ್ನು ಮುಕ್ಕುರಲು ಚುನಾವಣೆಯಂಥ (elections) ಸಂದರ್ಭವೇ ಬೇಕಿಲ್ಲ. ಇವತ್ತು ನೋಡಿ, ಅವರು ತಮ್ಮ ಗೃಹ ಕಚೇರಿಯಲ್ಲಿ ಕೃಷ್ಟಾದಲ್ಲಿಂದು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ನಡೆಸಿದರು. ಅವರು ಅಲ್ಲಿರುವ ವಿಷಯ ಗೊತ್ತಾಗುತ್ತಿದ್ದಂತೆಯೇ ಜನ ಅದರಲ್ಲಿ ಹೆಚ್ಚಿನವರು ಕಾಂಗ್ರೆಸ್ ಮುಖಂಡರು ಅಲ್ಲಿಗೆ ಧಾವಿಸಿದರು. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಮತ್ತು ವಯಸ್ಸಿನಲ್ಲೂ ಹಿರಿಯರು, ಅವರಿಗೆ ಪಾದಮುಟ್ಟಿ ನಮಸ್ಕರಿಸುವುದು ತಪ್ಪಲ್ಲ. ಹಾಗೆ ನೋಡಿದರೆ, ಸಿದ್ದರಾಮಯ್ಯನವರಿಗೆ ಪಾದ ಮುಟ್ಟಿಸಿಕೊಳ್ಳುವುದು ಇಷ್ಟವಿಲ್ಲ, ತಾವು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಅದನ್ನು ಹೇಳಿದ್ದರು. ಅದರೂ ಜನ ಗೌರವ ಸಲ್ಲಿಸಲು ಅದನ್ನು ಮಾಡುತ್ತಾರೆ. ಮೊದಲೆಲ್ಲ ಪಾದ ಮುಟ್ಟಲು ಬಂದಾಗ ಬೇಡ ಅಂತ ಹಿಂದೆ ಸರಿಯುತ್ತಿದ್ದ ಸಿದ್ದರಾಮಯ್ಯ ಈಗ ಆಸ್ಪದ ಕೊಡುತ್ತಿದ್ದಾರೆ. ಆದರೆ, ವಿಷಯವೇನೆಂದರೆ ಇಂದು ಕಾಂಗ್ರೆಸ್ ಮುಖಂಡರು ಪೈಪೋಟಿಗೆ ಬಿದ್ದವರಂತೆ ಕಾಲು ಮುಟ್ಟಲು ಬಂದಾಗ ಅವರ ಸಿಡುಕಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಪ್ರಧಾನಿ ಮೋದಿಗೆ ಮತ್ತೊಮ್ಮೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ