Karnataka Budget 2025; ಸಿದ್ದರಾಮಯ್ಯ ಸರ್ವಸ್ಪರ್ಶಿ, ಸರ್ವವ್ಯಾಪಿ ಬಜೆಟ್ ಮಂಡಿಸಿದ್ದಾರೆ: ಶಿವರಾಂ ಹೆಬ್ಬಾರ್

Updated on: Mar 07, 2025 | 2:47 PM

ನೇಕಾರರಿಗೂ ಭರ್ಜರಿ ಕೊಡುಗೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ, ಹತ್ತು ಹೆಚ್ ಪಿ ವರೆಗಿನ ಮೋಟಾರುಗಳಿಗೆ ಸಿಗುತ್ತಿದ್ದ ಸಬ್ಸಿಡಿಯನ್ನು 20 ಹೆಚ್ ಪಿ ಮೋಟಾರುಗಳಿಗೆ ವಿಸ್ತರಿಸಿದ್ದಾರೆ, ಹಾಗೆಯೇ ಕರಾವಳಿ ಮತ್ತು ಮಲ್ನಾಡು ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದಾರೆ, ಕರಾವಳಿ ಪ್ರಾಂತ್ಯದಲ್ಲಿ ಕಡಲ ಕೊರೆತದಿಂದ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಲು ಕ್ರಮತೆಗೆದುಕೊಳ್ಳಲು ಪ್ರಾಮುಖ್ಯತೆ ನೀಡಿದ್ದಾರೆ ಎಂದು ಹೆಬ್ಬಾರ್ ಹೇಳಿದರು.

ಬೆಂಗಳೂರು, ಮಾರ್ಚ್ 7: ಬಿಜೆಪಿಯ ರೆಬೆಲ್ ಶಾಸಕರಲ್ಲಿ ಒಬ್ಬರಾಗಿರುವ ಶಿವರಾಂ ಹೆಬ್ಬಾರ್ (Shivaram Hebbar) ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ಹಾಡಿ ಹೊಗಳಿದ್ದಾರೆ. ಇದೊಂದು ಸರ್ವಸ್ಪರ್ಶಿ ಮತ್ತು ಸರ್ವವ್ಯಾಪಿ ಬಜೆಟ್, ಅತ್ಯುತ್ತಮವಾದ ಬಜೆಟ್ ಮಂಡಿಸಿರುವುದಕ್ಕೆ ಮುಖ್ಯಮಂತ್ರಿಯವರನ್ನು ಅಭಿನಂದಿಸುತ್ತೇನೆ, ವಿಶೇಷವಾಗಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ, ಅಡುಗೆ ಹೆಲ್ಪರ್​​ ಗಳಿಗೆ ಮತ್ತು ಮಾಧ್ಯಮದವರಿಗೆ ಗೌರವಧನ ಮತ್ತು ವೇತನಗಳನ್ನು ಹೆಚ್ಚಿಸಿ ಬಹಳ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೆಬ್ಬಾರ್ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಸಿದ್ದರಾಮಯ್ಯ ಬಜೆಟ್​ನಲ್ಲಿ ಶಿಕ್ಷಣ ಇಲಾಖೆಗೆ ಸಿಂಹಪಾಲು ಅನುದಾನ: ಯಾವ ಇಲಾಖೆ ಎಷ್ಟೆಷ್ಟು ಸಿಕ್ತು? ಇಲ್ಲಿದೆ ವಿವರ