ಶಾಲಾ ಮಕ್ಕಳಿಗೆ ಅಜೀಮ್ ಪ್ರೇಮ್​ಜೀ ಪ್ರತಿಷ್ಠಾನದಿಂದ ವಾರದಲ್ಲಿ 4 ಸಲ ಮೊಟ್ಟೆ: ಸಿದ್ದರಾಮಯ್ಯ

|

Updated on: Jul 20, 2024 | 12:57 PM

ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾಗುವ ಚಿಕ್ಕಪುಟ್ಟ ಮಕ್ಕಳಿಗೆ ಕರ್ನಾಟಕ ಸರ್ಕಾರವೇ ಮೊಟ್ಟೆ ಒದಗಿಸುತ್ತಿದೆ. ಕೆಲವೊಮ್ಮೆ ಕೊಳೆತ ಅಥವಾ ಒಡೆದ ಮೊಟ್ಟೆಗಳು ಕೇಂದ್ರಗಳಿಗೆ ಸರಬರಾಜುಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುತ್ತವೆ. ಅದನ್ನೆಲ್ಲ ಸ್ಟ್ರೀಮ್ ಲೈನ್ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಎಲ್ಲ ಸರ್ಕಾರೀ ಮತ್ತು ಅನುದಾನಿತ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅಜೀಮ್ ಪ್ರೇಮ್ ಜೀ ಪ್ರತಿಷ್ಠಾನವು ಮೊಟ್ಟೆ ಒದಗಿಸಲಿದೆ ಎಂದು ಹೇಳಿದರು. ಪ್ರತಿಷ್ಠಾನವು ವಾರದಲ್ಲಿ 4 ದಿನಗಳ ಕಾಲ ಪ್ರತಿಯೊಬ್ಬ ವಿದ್ಯಾರ್ಥಿಗೆ ತಲಾ ಒಂದು ಮೊಟ್ಟೆ ವಿತರಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ತಾನು ಈಗಷ್ಟೇ ಪ್ರತಿಷ್ಠಾನದ ಕಾರ್ಯಕ್ರಮ ಉದ್ಘಾಟಿಸಿ ಬರುತ್ತಿರುವುದಾಗಿ ಹೇಳಿದ ಸಿದ್ದರಾಮಯ್ಯ ಮೊಟ್ಟೆ ವಿತರಿಸುವ ಯೋಜನೆ ಎಂದಿನಿಂದ ಆರಂಭವಾಗಲಿದೆ ಅಂತ ಬಹಿರಂಗ ಪಡಿಸಲಿಲ್ಲ. ಅಜೀಮ್ ಪ್ರೇಮ್​ಜೀ ಹೇಳಿದ್ದಾರೆಂದರೆ ಅದು ಬೇಗ ಶುರುವಾಗುವುದರಲ್ಲಿ ಅನುಮಾನವಿಲ್ಲ. ಇದ ನಿಜಕ್ಕೂ ಬಹು ದೊಡ್ಡ ಕೊಡುಗೆ ಅನಿಸಲಿದೆ. ಸರ್ಕಾರೀ ಶಾಲೆಯಲ್ಲಿ ಓದುವ ಲಕ್ಷಾಂತರ ಮಕ್ಕಳು ಪೌಷ್ಠಿಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ವಾರದಲ್ಲಿ 4 ಮೊಟ್ಟೆ ನಿಸ್ಸಂದೇಹವಾಗಿ ಅವರ ದೇಹಕ್ಕೆ ಬೇಕಿರುವ ಪೌಷ್ಟಿಕಾಂಶ ಒದಗಿಸಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:       ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದ ಎಲ್ಲ ಹಗರಣಗಳನ್ನು ತನಿಖೆಗೆ ಒಪ್ಪಿಸುವೆ: ಸಿದ್ದರಾಮಯ್ಯ