ಸಿದ್ಧವಾಗಿರಿ: ಡಿನ್ನರ್ ಪಾರ್ಟಿಯಲ್ಲಿ ಸಂಪುಟ ಪುನಾರಚನೆಗೆ ಬಗ್ಗೆ ಸಚಿವರಿಗೆ ಸಿಎಂ ಮಹತ್ವದ ಸುಳಿವು
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತ ನಿವಾಸ ಕಾವೇರಿಯಲ್ಲಿ ತಮ್ಮ ಸಂಪುಟದ ಸಚಿವರಿಗೆ ಡಿನ್ನರ್ ಪಾರ್ಟಿ ಕೊಟ್ಟಿದ್ದಾರೆ. ಔತಣಕೂಟದಲ್ಲಿ ವೆಜ್ ನಾನ್ ವೆಜ್ ರುಚಿಕರ ಊಟದ ಜೊತೆಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಹತ್ವದ ಚರ್ಚೆಯಾಗಿವೆ. ಅಲ್ಲದೇ ಸಿದ್ದರಾಮಯ್ಯನವರು ಡಿನ್ನರ್ ಪಾರ್ಟಿ ನೆಪದಲ್ಲಿ ಸಚಿವರಿಗೆ ಕೆಲ ಕಿವಿಮಾತು ಹೇಳಿದ್ದಾರೆ. ಹಾಗಾದ್ರೆ, ಸಿಎಂ ಆಯೋಗಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಏನೇನು ಚರ್ಚೆ ಆಯ್ತು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಅಕ್ಟೋಬರ್ 13): ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದ್ದ ಸಿಎಂ ಸಿದ್ದರಾಮಯ್ಯ ಆಯೋಜಿಸಿದ್ದ ಸಚಿವರ ಡಿನ್ನರ್ ಸಭೆ ಅಂತ್ಯವಾಗಿದೆ. ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕೃತ ಕಾವೇರಿ ನಿವಾಸದಲ್ಲಿ ಸಚಿವರಿಗೆ ಡಿನ್ನರ್ ಪಾರ್ಟಿ ಕೊಟ್ಟಿದ್ದು, ಇದೇ ವೇಳೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪ್ರಮುಖವಾಗಿ ಚರ್ಚೆಯಾಗುತ್ತಿರುವ ಸಂಪುಟ ಪುನಾರಚನೆ ಬಗ್ಗೆಯೂ ಸಿಎಂ ಪ್ರಸ್ತಾಪ ಮಾಡಿದ್ದು, ಎಲ್ಲದಕ್ಕೂ ಸಿದ್ಧರಾಗಿರಿ ಎಂದು ಸಚಿವರಿಗೆ ಸಂಪುಟ ಪುನಾರಚನೆ ಬಗ್ಗೆ ಸುಳಿವು ನೀಡಿದ್ದಾರೆ. ಇನ್ನು ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು ಎನ್ನುವ ವಿವರ ಇಲ್ಲಿದೆ.
