ಮಸೀದಿಗೆ ಹೋದಾಗ ಟೋಪಿ ಧರಿಸುವ ಸಿದ್ದರಾಮಯ್ಯ ಈಗ ರೈತರಿಗೆ ಟೋಪಿ ಹಾಕುತ್ತಿದ್ದಾರೆ: ಆರ್ ಅಶೋಕ

|

Updated on: Nov 04, 2024 | 1:30 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಗೆಜೆಟ್ ನೋಟಿಫಿಕೇಶನ್ ವಾಪಸ್ಸು ತೆಗೆದುಕೊಳ್ಳುವವರೆಗೆ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ ಅಶೋಕ, ಉಳುವವನೇ ಭೂಮಿಯ ಒಡೆಯ ಕಾನೂನು ಹಿಂದೂಗಳ ಜಮೀನುಗಳಿಗೆ ಅನ್ವಯಿಸುವಂತೆ ವಕ್ಫ್ ಜಮೀನುಗಳಿಗೆ ಯಾಕೆ ಅನ್ವಯಿಸುವುದಿಲ್ಲ ಎಂದು ಪ್ರಶ್ನಿಸಿದರು.

ಬೆಂಗಳೂರು: ರಾಜ್ಯ ಬಿಜೆಪಿ ರೈತರ ಪರವಾಗಿ ಮಾಡುತ್ತಿರುವ ಹೋರಾಟ ಮತ್ತು ಪ್ರತಿಭಟನೆ ರಾಜಕೀಯ ದುರುದ್ದೇಶದಿಂದ ಕೂಡಿದ್ದು ಎಂದಿರುವ ಸಿದ್ದರಾಮಯ್ಯನವರ ಮಾತಿಗೆ ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ, ಸಿಎಂ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ, ಅವರ ಮಾತನ್ನು ರಾಜ್ಯದಲ್ಲಿ ಯಾರೂ ನಂಬಲ್ಲ, ಮಸೀದಿಗೆ ಹೋದಾಗ ಟೋಪಿ ಹಾಕುವ ಅವರು ಹೊರಬಂದಾಗ ತೆಗೆಯುತ್ತಾರೆ, ವಕ್ಫ್ ಜಮೀನಿಗೆ ಸಂಬಂಧಿಸಿದಂತೆ ಅವರು ಈಗ ರಾಜ್ಯದ ರೈತರಿಗೆ ಟೋಪಿ ಹಾಕಹೊರಟಿದ್ದಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸರ್ದಾರ್ ವಲ್ಲಭಭಾಯ್ ಪಟೇಲ್ ದೇಶವನ್ನು ಒಗ್ಗೂಡಿಸಿ ಶಕ್ತಿಶಾಲಿ ಮಾಡಿದ ವ್ಯಕ್ತಿ: ಆರ್ ಅಶೋಕ