Loading video

ದೇವೇಗೌಡ್ರಿಗೂ ತಟ್ಟಿದ ಪುತ್ರನ ದಾರಿ ತಪ್ಪಿದ ಹೇಳಿಕೆ ಬಿಸಿ: ಮೈತ್ರಿ ಸಮಾವೇಶದಲ್ಲಿ ಕೈ ಕಾರ್ಯಕರ್ತೆಯರ ಹೈಡ್ರಾಮಾ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 15, 2024 | 11:04 PM

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪ್ರತಿಕ್ರಿಯಿಸಿದ್ದು, ಹತಾಶ ಮನೋಭಾವನೆಯಿಂದ ಹೀಗೆ ಮಾಡಿದ್ದಾರೆ, ಎಷ್ಟರ ಮಟ್ಟಿಗೆ ಸರಿ. ಮಾಜಿ ಸಿಎಂ H.D.ಕುಮಾರಸ್ವಾಮಿ ಬೆಳಗ್ಗೆಯೇ ಸ್ಪಷ್ಟನೆ ಕೊಟ್ಟಿದ್ದಾರೆ. ಉದ್ದೇಶಪೂರ್ವಕವಾಗಿ ಕಳಿಸಿದಾಗ ಪೊಲೀಸರು ತಾನೇ ಏನ್ ಮಾಡುತ್ತಾರೆ. ನಾವೂ ಎಚ್ಚರ ವಹಿಸುತ್ತೇವೆ, ಪೊಲೀಸರು ಈ ಬಗ್ಗೆ ಗಮನಹರಿಸಲಿ ಎಂದು ಹೇಳಿದ್ದಾರೆ.

ತುಮಕೂರು, ಏಪ್ರಿಲ್​​ 15: ಗ್ಯಾರಂಟಿಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆಂಬ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ ವಿಚಾರ ಇದೀಗ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ (HD Deve Gowda)  ಕಾರ್ಯಕ್ರಮಕ್ಕೂ ಬಿಸಿ ತಟ್ಟಿದೆ. ನಗರದ ಕುಂಚಿಟಿಗರ ಸಭಾಭವನದಲ್ಲಿ ನಡೆದ ಮೈತ್ರಿ ಸಮಾವೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರಿಂದ ಹೈಡ್ರಾಮಾ ಮಾಡಲಾಗಿದೆ. ದೇವೇಗೌಡರಿದ್ದ ವೇದಿಕೆಗೆ ನುಗ್ಗಿ ಕಾಂಗ್ರೆಸ್​ ಕಾರ್ಯಕರ್ತೆಯರು ಧಿಕ್ಕಾರ ಕೂಗಿದ್ದಾರೆ. ಸದ್ಯ ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪ್ರತಿಕ್ರಿಯಿಸಿದ್ದು, ಹತಾಶ ಮನೋಭಾವನೆಯಿಂದ ಹೀಗೆ ಮಾಡಿದ್ದಾರೆ, ಎಷ್ಟರ ಮಟ್ಟಿಗೆ ಸರಿ. ಮಾಜಿ ಸಿಎಂ H.D.ಕುಮಾರಸ್ವಾಮಿ ಬೆಳಗ್ಗೆಯೇ ಸ್ಪಷ್ಟನೆ ಕೊಟ್ಟಿದ್ದಾರೆ. ಯಾರೋ ಹೆಣ್ಣು ಮಕ್ಕಳನ್ನ ಕಳಿಸಿ ಹೀಗೆ ಮಾಡಿದ್ದಾರೆ. ಮಾಜಿ ಪ್ರಧಾನಿಗೆ ಹೀಗೆ ಮಾಡಿದ್ದಾರೆ, ಇದೆಲ್ಲಾ ಆಗಬಾರದು. ಉದ್ದೇಶಪೂರ್ವಕವಾಗಿ ಕಳಿಸಿದಾಗ ಪೊಲೀಸರು ತಾನೇ ಏನ್ ಮಾಡುತ್ತಾರೆ. ನಾವೂ ಎಚ್ಚರ ವಹಿಸುತ್ತೇವೆ, ಪೊಲೀಸರು ಈ ಬಗ್ಗೆ ಗಮನಹರಿಸಲಿ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.