ಮೈಸೂರು ಮೇಯರ್ ಹುದ್ದೆಗೆ ಇಂದು ಚುನಾವಣೆ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ
ಬಿಜೆಪಿ 22 ಸದಸ್ಯರನ್ನು ಹೊಂದಿದ್ದು 5 ಬೇರೆ ಸದಸ್ಯರ ಬೆಂಬಲದೊಂದಿಗೆ 27 ಮತಗಳನ್ನು ಹೊಂದಿದೆ. ಹಾಗಾಗಿ ಜೆಡಿ(ಎಸ್) ಸದಸ್ಯರ ಬೆಂಬಲ ಪಡೆದುಕೊಳ್ಳಲು ಎರಡೂ ಪಕ್ಷಗಳು ಕಸರತ್ತು ನಡೆಸಲಿವೆ.
ಮೈಸೂರು ಮೇಯರ್ (Mayor) ಹುದ್ದೆಗೆ ಇಂದು (ಮಂಗಳವಾರ) ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಮತ್ತು ಬಿಜೆಪಿ (BJP) ಪಕ್ಷಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ತನ್ನ 20 ಸದಸ್ಯರ ಜೊತೆ ಬೇರೆ 6 ಸದಸ್ಯರ ಜೊತೆ 26 ಸದಸ್ಯರ ಬಲ ಹೊಂದಿರುವ ಕಾಂಗ್ರೆಸ್ (Congress) ಪಕ್ಷ ಯಾವ ಪಕ್ಷದೊಂದಿಗೂ ಮೈತ್ರಿಗೆ ಮುಂದಾಗಿಲ್ಲ. ಆದರೆ ಜೆಡಿ(ಎಸ್) ನೊಂದಿಗೆ ಅಂತರ ಕಾಯ್ದುಕೊಂಡಿರುವ ಮರಿತಿಬ್ಬೇಗೌಡ ಕಾಂಗ್ರೆಸ್ ಪರ ಮತ ಚಲಾಯಿಸಲಿದ್ದಾರೆ. ಬಿಜೆಪಿ 22 ಸದಸ್ಯರನ್ನು ಹೊಂದಿದ್ದು 5 ಬೇರೆ ಸದಸ್ಯರ ಬೆಂಬಲದೊಂದಿಗೆ 27 ಮತಗಳನ್ನು ಹೊಂದಿದೆ. ಹಾಗಾಗಿ ಜೆಡಿ(ಎಸ್) ಸದಸ್ಯರ ಬೆಂಬಲ ಪಡೆದುಕೊಳ್ಳಲು ಎರಡೂ ಪಕ್ಷಗಳು ಕಸರತ್ತು ನಡೆಸಲಿವೆ.
Latest Videos