ಕೋಟೆಹೊಲೆ ಗ್ರಾಮದಲ್ಲಿ ತಿರುಗಾಡುತ್ತಾ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್

ಕೋಟೆಹೊಲೆ ಗ್ರಾಮದಲ್ಲಿ ತಿರುಗಾಡುತ್ತಾ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 29, 2024 | 12:08 PM

ಕೋಟೆಹೊಲ ಗ್ರಾಮ ಚಿಕ್ಕದು ಮತ್ತು ಇಲ್ಲಿ ಮೂಲಭೂತ ಸೌಕರ್ಯಗಳು ಬರಿಗಣ್ಣಿಗೆ ಗೋಚರಿಸುತ್ತಿಲ್ಲ. ಮಣ್ಣಿನ ರಸ್ತೆಯ ಮೇಲೆ ಜನ ಮತ್ತು ಜನನಾಯಕ ತಿರುಗಾಡುತ್ತಿದ್ದಾರೆ. ಅಶ್ವತ್ಥ ಮರವೊಂದರ ಕೆಳಗೆ ನಿಂತು ಗ್ರಾಮಸ್ಥರನ್ನು ಉದ್ದೇಶಿಸಿ ಮಾತಾಡಿದ ಯೋಗೇಶ್ವರ್ ಹಲವು ಭರವಸೆಗಳನ್ನು ನೀಡಿದರು.

ರಾಮನಗರ: ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆ ರಂಗೇರುತ್ತಿದ್ದೆ. ಕಾಂಗ್ರೆಸ್ ಮತ್ತು ಎನ್​ಡಿಎ ಅಭ್ಯರ್ಥಿಗಳು ಹಳ್ಳಿಗಳಿಗೆ ತೆರಳಿ ಮತಯಾಚಿಸುತ್ತಿದ್ದಾರೆ. ಸಿಪಿ ಯೋಗೇಶ್ವರ್ ಕ್ಷೇತ್ರದ ಕೋಟೆಹೊಲ ಗ್ರಾಮದಲ್ಲಿ ಜನರನ್ನು ಭೇಟಿಯಾಗಿ ಮತಯಾಚಿಸಿದರು. ಚುನಾವಣೆ ಸಮಯದಲ್ಲಿ ನೇತಾರರ ಜೋಡಿಸಿದ ಕೈಗಳು ಜೋಡಿಸಿದಂಗೇ ಇರುತ್ತವೆ! ಯೋಗೇಶ್ವರ್ ಗ್ರಾಮಸ್ಥರ ಜೊತೆ ಅದರಲ್ಲೂ ವಿಶೇಷವಾಗಿ ಮಹಿಳೆಯರ ಜೊತೆ ಆತ್ಮೀಯವಾಗಿ ಮಾತಾಡುತ್ತ ಮತಯಾಚಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಜಾತಿ ಲೆಕ್ಕಾಚಾರ: ಮುಸ್ಲಿಂ ಮತಗಳ ಮೇಲೆ ಯೋಗೇಶ್ವರ್, ಜೆಡಿಎಸ್ ಕಣ್ಣು