ಮುಸಲ್ಮಾನರಿಗೆ ಮೀಸಲಾತಿ ನೀಡುವ ಬಿಲ್ ಪಾಸ್ ಮಾಡಲು ನಮ್ಮ ಶಾಸಕರನ್ನು ಸಸ್ಪೆಂಡ್ ಮಾಡಿದ್ದಾರೆ: ವಿಜಯೇಂದ್ರ

Updated on: Mar 22, 2025 | 5:37 PM

ಹಗಲಿರುಳು ಸಂವಿಧಾನದ ಪರಿಪಾಲಕರು, ಅದನ್ನು ಬಿಟ್ಟು ಬೇರೇನೂ ಯೋಚಿಸುವುದಿಲ್ಲ ಎಂಬಂತೆ ಪೋಸು ಬಿಗಿಯುವ ಕಾಂಗ್ರೆಸ್ ನಾಯಕರು ಮುಸಲ್ಮಾನರಿಗೆ ಮೀಸಲಾತಿಯನ್ನು ಕಲ್ಪಿಸಲು ಸಂವಿಧಾನವನ್ನೂ ಉಲ್ಲಂಘಿಸಿದ್ದಾರೆ ಎಂದು ಹೇಳಿದ ವಿಜಯೇಂದ್ರ ಮೀಸಲಾತಿಯನ್ನು ಧರ್ಮದ ಆಧಾರದಲ್ಲಿ ನೀಡಲು ಬರಲ್ಲ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕೆನ್ನುವ ಸಂವಿಧಾನದ ಭಾಗವನ್ನು ಓದಿ ಹೇಳಿದರು.

ಬೆಂಗಳೂರು, ಮಾರ್ಚ್ 22: ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಮುಸಲ್ಮಾನರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆಯಲ್ಲಿ ಶೇಕಡ 4ರಷ್ಟ್ಟು ಮೀಸಲಾತಿ ಕಲ್ಪಿಸಬೇಕಾಗಿತ್ತು, ಅದೇ ಕಾರಣಕ್ಕೆ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಸರ್ಕಾರದ ಈ ಸಾಲಿನ ಬಜೆಟ್​ನಲ್ಲೂ ಮುಸ್ಲಿಂ ಸಮುದಾಯಕ್ಕೆ ಅನೇಕ ಸವಲತ್ತುಗಳನ್ನು ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸದನದಲ್ಲಿ ವಿರೋಧಿಸಿದ್ದಾರೆ, ಎಂದು ವಿಜಯೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಿದ್ದರಾಮಯ್ಯ ಮಂಡಿಸಿದ್ದು ಕೇವಲ ಮುಸಲ್ಮಾನರಿಗೆ ವಿಶೇಷ ಪ್ಯಾಕೇಜ್​ಗಳನ್ನು ಕಲ್ಪಿಸುವ ಬಜೆಟ್: ಬಿವೈ ವಿಜಯೇಂದ್ರ