AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ, ಡಿಕೆಶಿ ನಡುವಿನ ಸಿಎಂ ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್ ಕೊಟ್ಟ KN ರಾಜಣ್ಣ

ಸಿದ್ದರಾಮಯ್ಯ, ಡಿಕೆಶಿ ನಡುವಿನ ಸಿಎಂ ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್ ಕೊಟ್ಟ KN ರಾಜಣ್ಣ

ರಮೇಶ್ ಬಿ. ಜವಳಗೇರಾ
|

Updated on: Nov 26, 2025 | 4:48 PM

Share

ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಸಿಎಂ ಕುರ್ಚಿಗಾಗಿ ಕಿತ್ತಾಟ ಶುರುವಾಗಿದೆ. ಎರಡೂ ಕಡೆ ಬಣದ ಶಾಸಕರು, ಸಚಿವರು ತಮ್ಮ ತಮ್ಮ ನಾಯಕರ ಬಗ್ಗೆ ಹೇಳಿಕೆಯನ್ನು ನೀಡುತ್ತಿದ್ದಾರೆ. ಕೆಲವರು ಡಿಕೆ ಶಿವಕುಮಾರ್​​​ ಅವರನ್ನು ಸಿಎಂ ಮಾಡಬೇಕೆಂದು ಪಟ್ಟು ಹಿಡಿದ್ದಿದ್ದರೆ, ಇನ್ನೂ ಕೆಲವರು, ಇನ್ನೂ ಎರಡುವರೆ ವರ್ಷ ಸಿದ್ದರಾಮಯ್ಯನವರನ್ನೇ ಮುಂದುವರೆಸಬೇಕೆಂದು ಆಗ್ರಹಿಸಿದ್ದಾರೆ. ಈ ನಡುವೆ ಮಾಜಿ ಸಚಿವ ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಎಲ್ಲರೂ ಡಿಕೆ.ಶಿವಕುಮಾರ್​ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗೋಣ. ಬಹುಮತ ತಂದು ಡಿಕೆ ಶಿವಕುಮಾರ್ 5 ವರ್ಷ ಸಿಎಂ ಆಗಲಿ ಎಂದಿದ್ದಾರೆ.

ತುಮಕೂರು, ನವೆಂಬರ್ 26): ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಸಿಎಂ ಕುರ್ಚಿಗಾಗಿ ಕಿತ್ತಾಟ ಶುರುವಾಗಿದೆ. ಎರಡೂ ಕಡೆ ಬಣದ ಶಾಸಕರು, ಸಚಿವರು ತಮ್ಮ ತಮ್ಮ ನಾಯಕರ ಬಗ್ಗೆ ಹೇಳಿಕೆಯನ್ನು ನೀಡುತ್ತಿದ್ದಾರೆ. ಕೆಲವರು ಡಿಕೆ ಶಿವಕುಮಾರ್​​​ ಅವರನ್ನು ಸಿಎಂ ಮಾಡಬೇಕೆಂದು ಪಟ್ಟು ಹಿಡಿದ್ದಿದ್ದರೆ, ಇನ್ನೂ ಕೆಲವರು, ಇನ್ನೂ ಎರಡುವರೆ ವರ್ಷ ಸಿದ್ದರಾಮಯ್ಯನವರನ್ನೇ ಮುಂದುವರೆಸಬೇಕೆಂದು ಆಗ್ರಹಿಸಿದ್ದಾರೆ. ಈ ನಡುವೆ ಮಾಜಿ ಸಚಿವ ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಎಲ್ಲರೂ ಡಿಕೆ.ಶಿವಕುಮಾರ್​ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗೋಣ. ಬಹುಮತ ತಂದು ಡಿಕೆ ಶಿವಕುಮಾರ್ 5 ವರ್ಷ ಸಿಎಂ ಆಗಲಿ ಎಂದಿದ್ದಾರೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿರುವ ರಾಜಣ್ಣ, ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯರನ್ನು ಆಯ್ಕೆ ಮಾಡಿದ್ದು. ಈಗ ಸಿಎಲ್​ಪಿ ಸಭೆಯಲ್ಲೇ ತೀರ್ಮಾನ ಆಗಬೇಕು. CLPಯಲ್ಲಿ ಯಾರಾದರೂ ರಾಜೀನಾಮೆ ಕೊಡಬೇಕು ಎಂದಿದ್ದಾರಾ? 30-30 ತಿಂಗಳು ಒಪ್ಪಂದ ಎಂದು ಸುಮ್ಮನೇ ಹೇಳ್ತಾರೆ. ನಾಯಕತ್ವ ಬಗ್ಗೆ ಹೈಕಮಾಂಡ್ ಮಾತಾಡಬಾರದು ಎಂದು ಹೇಳಿದ್ದಾರೆ. ನನ್ನ ವೈಯಕ್ತಿಕ ಆಶಯ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರಬೇಕು. 2013ರ ಚುನಾವಣೆಯಲ್ಲಿ ಪರಮೇಶ್ವರ್ ಪಕ್ಷವನ್ನು ಅಧಿಕಾರಕ್ಕೆ ತಂದ್ರು. ಡಿಕೆ‌ ಕೂಲಿ ಕೇಳಿದಂತೆ ಪರಮೇಶ್ವರ್ ಕೂಡ ಕೂಲಿ ಕೇಳಬೇಕಲ್ಲವೇ? ಮೊದಲು ಡಾ.ಜಿ.ಪರಮೇಶ್ವರ್ ಅವರ ಹಳೇ ಕೂಲಿ ಕ್ಲಿಯರ್ ಆಗಲಿ. ನಮ್ಮ ಮೊದಲ ಆಶಯ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಇರಬೇಕು. ಅನಿವಾರ್ಯತೆ ಬಂದ್ರೆ ಪರಮೇಶ್ವರ್ ಸಿಎಂ ಆಗಲಿ, ಇದು ನನ್ನ ಅಭಿಪ್ರಾಯ ಎಂದು ಹೇಳಿದರು.