ಮೈಸೂರಿಗೆ ಹಿಂಗ್ ಬಂದ್ ಹಂಗ್ ಹೊರಟ ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ ಬೆನ್ನಲ್ಲೇ ಇಂದು ಮೈಸೂರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸಿದ್ದಾರೆ. ಆದ್ರೆ, ನಗರದೊಳಗೆ ಆಗಮಿಸಿದೆ ಹಿಂಗ್ ಬಂದ್ ಬಂದ್ ಹಾಗೇ ತೆರಳಿದ್ದಾರೆ.
ಮೈಸೂರು, (ಏಪ್ರಿಲ್ 15): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಓಡಾಟ ಜೋರಾಗಿದೆ. ನಿನ್ನೆ ಅಷ್ಟೇ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಿದರು. ಇದರ ಬೆನ್ನಲ್ಲೇ ಮೈಸೂರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸಿದ್ದಾರೆ. ಹೌದು…ಇಂದು (ಏಪ್ರಿಲ್ 15) ರಾಹುಲ್ ಗಾಂಧಿ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಮೈಸೂರು ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಡಾ ಬಿ ಜೆ ವಿಜಯಕುಮಾರ್ ಸೇರಿದಂತೆ ಸ್ಥಳೀಯ ನಾಯಕರು ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು.
ಆದ್ರೆ, ರಾಹುಲ್ ಗಾಂಧಿ ಮೈಸೂರು ನಗರಕ್ಕೆ ಆಗಮಿಸಿದ ವಿಮಾನ ನಿಲ್ದಾಣದಿಂದಲೇ ಕೇರಳದ ವಯನಾಡಿಗೆ ತೆರಳಿದರು. ವಯನಾಡಿಗೆ ಹೋಗಬೇಕೆಂದು ರಾಹುಲ್ ಗಾಂಧಿ ಅವರು ನವದೆಹಲಿಯಿಂದ ವಿಮಾನದಲ್ಲಿ ಮೈಸೂರಿಗೆ ಬಂದಿಳಿದು ಬಳಿಕ ವಿಶೇಷ ಹೆಲಿಕಾಪ್ಟರ್ನಲ್ಲಿ ವಯನಾಡಿಗೆ ಹಾರಿದರು. ಇನ್ನು ರಾಹುಲ್ ಗಾಂಧಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸಾಥ್ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ