ಸಂವಿಧಾನವನ್ನು ಕೈಯಲ್ಲಿ ಹಿಡಿಯುವ ಅಧಿಕಾರ ಕಾಂಗ್ರೆಸ್ ನಾಯಕರಿಗಿಲ್ಲ: ಸಿಟಿ ರವಿ, ಪರಿಷತ್ ಸದಸ್ಯ
ತನ್ನ ಮೇಲೆ ಕೇಸ್ ಇತ್ತು ಎಂದು ಸಿದ್ದರಾಮಯ್ಯ ಸರ್ಕಾರ ಜನರಿಗೆ ಮತ್ತು ಮಾಧ್ಯಮಗಳಿಗೆ ಸುಳ್ಳು ಹೇಳುತ್ತಿದೆ, ಚಿಕ್ಕಬಳ್ಳಾಪುರದಲ್ಲಾಗಲೀ ಕೋಲಾರದಲ್ಲಾಗಲೀ ತನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ, ಕೇಸ್ ಇದ್ದ ಬಗ್ಗೆ ಸರ್ಕಾರ ದಾಖಲೆ ತೋರಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಸವಾಲೆಸೆದರು.
ಬೆಂಗಳೂರು: ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ನಾಯಕ ಸಿಟಿ ರವಿ, ಹುಬ್ಬಳ್ಳಿ ಪ್ರಕರಣವನ್ನು ಹಿಂಪಡೆಯುವ ಮೂಲಕ ಸರ್ಕಾರ ದೊಡ್ಡ ಪ್ರಮಾದವೆಸಗಿದೆ, ಪೊಲೀಸ್ ಸ್ಟೇಶನ್ ಬೆಂಕಿ ಹಚ್ಚಿದ ಮತ್ತು ಪೊಲೀಸರು ಗಾಯಗೊಂಡ ಪ್ರಕರಣವು ಗಂಭೀರ ಸ್ವರೂಪದ್ದ್ದು, ದುಷ್ಕರ್ಮಿಗಳು ಆಂಜನೇಯ ದೇವಸ್ಥಾನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ, ಅವರಿಗೆ ಜಾಮೀನು ಕೊಡಬಾರದೆಂದು ಸರ್ವೋಚ್ಛ ನ್ಯಾಯಾಲಯ ಹೇಳಿತ್ತು ಎಂದರು. ಕಾಂಗ್ರೆಸ್ ನಾಯಕರಿಗೆ ಕೈಯಲ್ಲಿ ಭಾರತದ ಸಂವಿಧಾನ ಹಿಡಿಯುವ ನೈತಿಕ ಅಧಿಕಾರವಿಲ್ಲ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯರನ್ನ ಒಂದು ನಟೋರಿಯಸ್ ಗ್ಯಾಂಗ್ ಖೆಡ್ಡಾಗೆ ಕೆಡವಿದೆ: ಹೊಸ ಬಾಂಬ್ ಸಿಡಿಸಿದ ಸಿಟಿ ರವಿ