ಪಹಲ್ಗಾಮ್ ಉಗ್ರರ ದಾಳಿ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ: ರೇಣುಕಾಚಾರ್ಯ

Updated on: May 01, 2025 | 4:49 PM

ಸಿದ್ದರಾಮಯ್ಯ ಮತ್ತು ಸಚಿವ ಸಂತೋಷ್ ಲಾಡ್ ಉಗ್ರರನ್ನು ಮನೆ ಹೊಕ್ಕು ಹೊಡೆಯಬೇಕು ಅಂತ ಹೇಳಿದ್ದಾರೆ, ಅವರ ಮಾತಿಗೆ ಸ್ವಾಗತವಿದೆ, ಅದರೆ ಎರಡನೇ ಬಾರಿ ಸಚಿವರಾಗಿರುವ ಲಾಡ್ ನಿನ್ನೆ ಮೈಸೂರಲ್ಲಿ, ಕಾಶ್ಮೀರಿಗಳ ಮೇಲೆ ಅತ್ಯಾಚಾರ ನಡೆದಿದೆ ಅಂತ ಹೇಳಿದ್ದಾರೆ, ಅವರ ಮಾತಿನ ಅರ್ಥವೇನು? ಪದಗಳ ಬಳಕೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕೆನ್ನುವ ಅರಿವು ಸಚಿವನಿಗಿಲ್ಲವೇ ಎಂದು ರೇಣುಕಾಚಾರ್ಯ ಕೇಳಿದರು.

ದಾವಣಗೆರೆ, ಮೇ 1: ಕಾಂಗ್ರೆಸ್ ಪಕ್ಷ ಗೊಂದಲದ ಗೂಡಾಗಿದೆ, ಪಹಲ್ಗಾಮ್ ಉಗ್ರರ ದಾಳಿ ವಿಷಯದಲ್ಲಿ ಏನು ಪ್ರತಿಕ್ರಿಯೆ ನೀಡಬೇಕೆನ್ನುವುದು ಅವರಿಗೆ ಗೊತ್ತಾಗುತ್ತಿಲ್ಲ, ಒಬ್ಬೊಬ್ಬರು ಒಂದೊಂದು ಬಗೆಯ ಹೇಳಿಕೆ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿದರು. ಕಾಂಗ್ರೆಸ್ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ರಾಹುಲ್ ಗಾಂಧಿ ದೇಶದ ಪ್ರಧಾನ ಮಂತ್ರಿಯವರೊಂದಿಗೆ ನಿಂತರೆ ಮಿಕ್ಕವರು ಭದ್ರತಾ ಲೋಪ ಅಂತ ಹೇಳಿಕೆ ನೀಡಿ ತಮ್ಮ ಅಜ್ಞಾನ ಪ್ರದರ್ಶಿಸುತ್ತಾರೆ ಎಂದ ಹೇಳಿದ ರೇಣುಕಾಚಾರ್ಯ, ಬೆಲೆಯೇರಿಕೆ ವಿರುದ್ಧ ಪ್ರತಿಭಟನೆ ನಡೆಸುವ ನೈತಿಕ ಹಕ್ಕು ಸಿದ್ದರಾಮಯ್ಯ ಸರ್ಕಾರಕ್ಕಿಲ್ಲ, ಯಾಕೆಂದರೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರವೇ ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟಿದೆ ಎಂದರು.

ಇದನ್ನೂ ಓದಿ:  ಹನಿ ಟ್ರ್ಯಾಪ್ ಪ್ರಕರಣದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ಏಜೆಂಟ್​​ನಂತೆ ವರ್ತಿಸಿದ್ದಾರೆ: ರೇಣುಕಾಚಾರ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ