ವಕ್ಫ್ ಅದಾಲತ್ ಮುಂದೆ ನಮ್ಮ ರೈತರು ಕೈಕಟ್ಟಿ ನಿಲ್ಲುವಂತೆ ಮಾಡಿದ್ದು ಕಾಂಗ್ರೆಸ್: ಶೋಭಾ ಕರಂದ್ಲಾಜೆ

|

Updated on: Nov 05, 2024 | 10:16 AM

ವಕ್ಫ್ ಸಚಿವ ಜಮೀರ್ ಅಹ್ಮದ್ ಒಬ್ಬ ಮತಾಂಧ, ಅಧಿಕಾರಿಗಳನ್ನು ಹೆದರಿಸಿ ಅವರ ಮೂಲಕ ರೈತರಿಗೆ ನೋಟೀಸ್​ಗಳನ್ನು ಜಾರಿ ಮಾಡಿಸುತ್ತಿದ್ದಾರೆ, ಸ್ಮಶಾನಗಳ ಫೋಟೋ ತೋರಿಸಿ ಅವುಗಳ ಮೇಲೆ ಸೈತಾನಗಳ ಕಣ್ಣು ಬಿದ್ದಿದೆ ಅನ್ನುತ್ತಾರೆ, ಇವರಿಗೆ ವೋಟು ನೀಡಿ ಅಧಿಕಾರ ಕೊಟ್ಟಿರುವ ಹಿಂದೂ ಮತದಾರರು ಸೈತಾನರೇ? ಎಂದು ಶೋಭಾ ಪ್ರಶ್ನಿಸಿದರು.

ವಿಜಯಪುರ: ವಕ್ಫ್ ಬೋರ್ಡ್​ನಿಂದ ರೈತರಿಗೆ ನೀಡಿರುವ ನೋಟೀಸ್​ಗಳ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ಧಾಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ. ನಿನ್ನೆ ರಾತ್ರಿ ಮಾತಾಡಿದ ಶೋಭಾ ಅವರು, 1954-55 ರಲ್ಲೇ ಸಂವಿಧಾನದಲ್ಲಿ ವಕ್ಫ್ ಪದವನ್ನು ಸೇರಿಸಿದ ಕಾಂಗ್ರೆಸ್ 1995 ರಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದು ನಮ್ಮ ರೈತರು ಸಿವಿಲ್ ಕೋರ್ಟ್, ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ ಮೊರೆಹೋಗದ ಮತ್ತು ವಕ್ಫ್ ಟ್ರಿಬ್ಯೂನಲ್ ಮುಂದೆ ಕೈಕಟ್ಟಿ ನಿಲ್ಲುವ ದೈನೇಸಿ ಸ್ಥಿತಿಯನ್ನು ತಂದಿಟ್ಟಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕರ್ನಾಟಕದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ, ಸಿದ್ದರಾಮಯ್ಯ ಸಿಎಂ ಆದಮೇಲೆ ಹಿಟ್ಲರ್ ಆಗಿದ್ದಾರೆ: ಶೋಭಾ ಕರಂದ್ಲಾಜೆ ವಾಗ್ದಾಳಿ