ಕ್ರಿಕೆಟ್ ಆಡುತ್ತಾ ಜಾರಿ ಬಿದ್ದ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ: ವಿಡಿಯೋ ನೋಡಿ
ಬಂಟರ ಸಂಘದ ವತಿಯಿಂದ ನಡೆದ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಡಿದ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಜಾರಿ ಬಿದ್ದರು. ಈ ಸಂದರ್ಭದಲ್ಲಿ ಸಹ ಆಟಗಾರರು ಅವರನ್ನು ಮೇಲಕ್ಕೆತ್ತಿದ್ದರು. ಅದೃಷ್ಟವಶಾತ್ ಶಾಸಕರಿಗೆ ಯಾವುದೇ ಗಾಯಗಳಾಗಿಲ್ಲ. ಘಟನೆ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಮಂಗಳೂರು, ಫೆಬ್ರವರಿ 22: ಕ್ರಿಕೆಟ್ ಆಟವಾಡುತ್ತಿದ್ದಾಗ ರನೌಟ್ನಿಂದ ಬಚಾವಾಗಲು ಯತ್ನಿಸಿದ ವೇಳೆ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಜಾರಿಬಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ವೇಳೆ ಶಾಸಕರು ಜಾರಿಬಿದ್ದರು. ಬಂಟರ ಸಂಘದ ವತಿಯಿಂದ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಶಾಸಕ ಅಶೋಕ್ ಕುಮಾರ್ ರೈ ಕ್ರಿಕೆಟ್ ಆಡಿದರು. ಬಿದ್ದ ಶಾಸಕರನ್ನು ಸಹ ಆಟಗಾರರು ಎತ್ತಿದರು.
Published on: Feb 22, 2025 03:21 PM
Latest Videos