Karnataka Assembly Polls: ದೆಹಲಿಯಲ್ಲಿ ಸಿದ್ದರಾಮಯ್ಯ ಸಮ್ಮುಖ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಗೆ ಮುಂದಾದ ಶಾಸಕ ಬೈರತಿ ಸುರೇಶ್
ರೊಚ್ಚಿಗೆದ್ದ ಮಾಧ್ಯಮ ಪ್ರತಿನಿಧಿಗಳು ತಿರುಗಿಬಿದ್ದಾಗ ಸಿದ್ದರಾಮಯ್ಯನವರು ಸಮಾಧಾನಪಡಿಸುತ್ತಾರೆ. ಸುರೇಶ್ ಏನೋ ಹೇಳಲು ಪ್ರಯತ್ನಿಸಿದಾಗ ವಿರೋಧ ಪಕ್ಷದ ನಾಯಕ ಸುಮ್ನಿರಯ್ಯ ಅಂತ ಗದರುತ್ತಾರೆ.
ನವದೆಹಲಿ: ಸದಾ ಸಿದ್ದರಾಮಯ್ಯ (Siddaramaiah) ಹಿಂದೆ ಸುತ್ತುತ್ತಾ ಮೈಲೇಜ್ ಗಿಟ್ಟಿಸಲು ಪ್ರಯತ್ನಿಸುವ ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ (Byrathi Suresh) ಮಾಧ್ಯಮದವರನ್ನು ಹಗುರವಾಗಿ ಪರಿಗಣಿಸಿದಂತಿದೆ. ದೆಹಲಿಯಲ್ಲಿಂದು ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳ (media persons) ಜೊತೆ ಮಾತಾಡುತ್ತಿದ್ದಾಗ ಈವಯ್ಯಗೆ ಅದ್ಯಾಕೆ ಬೆಂಕಿಹೊತ್ತಿಕೊಂಡಿತೋ? ಪತ್ರಕರ್ತರು ಸಿದ್ದರಾಮಯ್ಯನವರಿಗೆ ಕೇಳಿದ ಪ್ರಶ್ನೆಯೊಂದಕ್ಕೆ ಈ ಆಸಾಮಿ ಕೊತಕೊತ ಕುದಿಯಲಾರಂಭಿಸಿ ಹಲ್ಲೆಗೆ ಮುಂದಾಗುತ್ತಾರೆ. ರೊಚ್ಚಿಗೆದ್ದ ಮಾಧ್ಯಮ ಪ್ರತಿನಿಧಿಗಳು ತಿರುಗಿಬಿದ್ದಾಗ ಸಿದ್ದರಾಮಯ್ಯನವರು ಸಮಾಧಾನಪಡಿಸುತ್ತಾರೆ. ಸುರೇಶ್ ಏನೋ ಹೇಳಲು ಪ್ರಯತ್ನಿಸಿದಾಗ ವಿರೋಧ ಪಕ್ಷದ ನಾಯಕ ಸುಮ್ನಿರಯ್ಯ ಅಂತ ಗದರುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos