ಗ್ಯಾರಂಟಿ ಯೋಜನೆ ರದ್ದು ಮಾಡಬೇಕೆಂದಿದ್ದ ಗವಿಯಪ್ಪ ಯು-ಟರ್ನ್, ಹಾಗೆ ಹೇಳಿಲ್ಲವೆಂದ ಶಾಸಕ
ಗ್ಯಾರಂಟಿ ಯೋಜನೆಗಳನ್ನು ಪ್ರಶ್ನಿಸುವ ಶಾಸಕರಿಗೆ ನೋಟೀಸ್ ನೀಡಲಾವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಡಕ್ಕಾಗಿ ಹೇಳಿರುವುದಕ್ಕೆ ಗವಿಯಪ್ಪ ತಮ್ಮ ಹೇಳಿಕೆಯ ಬಗ್ಗೆ ಯು-ಟರ್ನ್ ತೆಗೆದುಕೊಂಡಿದ್ದಾರೆಯೇ ಎಂಬ ಅನುಮಾನ ಕನ್ನಡಿಗರನ್ನು ಕಾಡದಿರದು. ಬಿಡುಗಡೆ ಮಾಡಿರುವ ಅನುದಾನವನ್ನೂ ವಾಪಸ್ಸು ಪಡೆದಾರು ಅಂತ ಶಾಸಕ ಆತಂಕಕ್ಕೆ ಒಳಗಾಗಿರುವ ಸಾಧ್ಯತೆಯೂ ಇದೆ.
ವಿಜಯನಗರ: ಕಾಂಗ್ರೆಸ್ ಪಕ್ಷದ ಶಾಸಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತಾಡಿದರೆ ಅವರ ಹೇಳಿಕೆಯನ್ನು ವರದಿ ಮಾಡುವುದೋ ಬೇಡವೋ ಎಂಬ ಗೊಂದಲ ಮೂಡುತ್ತಿದೆ. ಎರಡು ದಿನಗಳ ಹಿಂದೆ ಹೊಸಪೇಟೆ ಶಾಸಕ ಹೆಚ್ ಆರ್ ಗವಿಯಪ್ಪ ಏನು ಹೇಳಿದ್ದರು ಅಂತ ಕನ್ನಡಿಗರಿಗೆಲ್ಲ ಗೊತ್ತು. ಅದರೆ ಅವರು ನಮ್ಮ ವರದಿಗಾರನಿಗೆ ಏನು ಹೇಳುತ್ತಿದ್ದಾರೆ ಅಂತ ಕೇಳಿಸಿಕೊಳ್ಳಿ. ತಮಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ಅವರಿಂದ ಎಷ್ಟೆಷ್ಟು ಅನುದಾನ ಬಂದಿದೆ ಅಂತ ಲೆಕ್ಕ ಕೊಡುತ್ತಾರೆ ಮತ್ತು ಗ್ಯಾರಂಟಿ ಯೋಜನೆಗಳು ಯಾವ ಕಾರಣಕ್ಕೂ ನಿಲ್ಲಬಾರದು ಎನ್ನುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 2 ಗ್ಯಾರಂಟಿಗಳನ್ನು ಕೈ ಬಿಡಬೇಕೆಂದು ಸಿದ್ದರಾಮಯ್ಯಗೆ ಮನವಿ ಮಾಡ್ತೇವೆ: ಕಾಂಗ್ರೆಸ್ ಶಾಸಕ