ರಾಜ್ಯ ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ

Edited By:

Updated on: Mar 14, 2026 | 5:01 PM

ಇದೇ ಮಾರ್ಚ್ 6ರಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ 2026ನೇ ಸಾಲಿನ ರಾಜ್ಯ ಬಜೆಟ್​​​​ ಗೆ ಆಡಳಿತರೂಢ ಪಕ್ಷದ ಶಾಸಕ ಇಕ್ಬಾಲ್ ಹುಸೇನ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಹೌದು...ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಮಾತನಾಡಿ ರಾಜ್ಯ ಬಜೆಟ್ ನನಗೆ ಸಮಾಧಾನ ತಂದಿಲ್ಲ. ಮುಖ್ಯಮಮಂತ್ರಿಯವರ ಮೇಲಿನ ಭರವಸೆ ಹುಸಿಯಾಗಿದೆ ಎಂದು ಸಿದ್ದರಾಮಯ್ಯ ಮೇಲೆ ಅಸಮಾಧಾನ ಹೊರಹಾಕಿದ್ದು, ಈ ಸಂಬಂಧ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಬಜೆಟ್ ಬಗ್ಗೆ ಅಸಮಾಧಾನಗೊಂಡಿರುವುದ್ಯಾಕೆ ಎನ್ನುವುದಕ್ಕೆ ಇಕ್ಬಾಲ್ ಹುಸೇನ್ ಕಾರಣ ನೀಡಿದ್ದು, ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡದಿದ್ದರಿಂದ ಅಸಮಾಧಾನಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ರಾಮನಗರ, (ಮಾರ್ಚ್ 14): ಇದೇ ಮಾರ್ಚ್ 6ರಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ 2026ನೇ ಸಾಲಿನ ರಾಜ್ಯ ಬಜೆಟ್​​​​ ಗೆ ಆಡಳಿತರೂಢ ಪಕ್ಷದ ಶಾಸಕ ಇಕ್ಬಾಲ್ ಹುಸೇನ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಹೌದು…ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಮಾತನಾಡಿ ರಾಜ್ಯ ಬಜೆಟ್ ನನಗೆ ಸಮಾಧಾನ ತಂದಿಲ್ಲ. ಮುಖ್ಯಮಮಂತ್ರಿಯವರ ಮೇಲಿನ ಭರವಸೆ ಹುಸಿಯಾಗಿದೆ ಎಂದು ಸಿದ್ದರಾಮಯ್ಯ ಮೇಲೆ ಅಸಮಾಧಾನ ಹೊರಹಾಕಿದ್ದು, ಈ ಸಂಬಂಧ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಬಜೆಟ್ ಬಗ್ಗೆ ಅಸಮಾಧಾನಗೊಂಡಿರುವುದ್ಯಾಕೆ ಎನ್ನುವುದಕ್ಕೆ ಇಕ್ಬಾಲ್ ಹುಸೇನ್ ಕಾರಣ ನೀಡಿದ್ದು, ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡದಿದ್ದರಿಂದ ಅಸಮಾಧಾನಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ರಾಮನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ಇಕ್ಬಾಲ್​ ಹುಸೇನ್​, ನನ್ನ ಕ್ಷೇತ್ರದ ಬಗ್ಗೆ ಮಾತನಾಡಿದ್ದೇನೆ. ಯಾರು ಏನಾದರೂ ಹೇಳಲಿ. ನಾನು ಸಿಎಂ ಹಾಗೂ ಡಿಸಿಎಂ ಇಬ್ಬರ ಜೊತೆಗೂ ಚರ್ಚೆ ಮಾಡಿದ್ದೇನೆ. ನನ್ನ ಕ್ಷೇತ್ರದ ಬಗ್ಗೆ ತೋಡಿಕೊಂಡ ನೋವಿಗೆ ಪ್ರತಿಫಲ ಸಿಕ್ಕಿಲ್ಲ. ಹಾಗಾಗಿ ನಾನು ಮಾತನಾಡಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.

ರಸ್ತೆ, ಚರಂಡಿ ದುರಸ್ತಿ ಸೇರಿದಂತೆ ಇತರೆ ವಿಚಾರಕ್ಕೆ ಹಣ ಕೇಳಿದ್ದೆ, ಸಿಕ್ಕಿಲ್ಲ. ಖಜಾನೆ ಏನು ಖಾಲಿ ಇಲ್ಲ, ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದೇವೆ. ಈ ಹಿಂದೆ ಸಿಎಂ ಆಗಿದ್ದಾಗ ಬಸವರಾಜ ಬೊಮ್ಮಾಯಿ ಬಂದಿದ್ರು. ಆ ಗಲೀಜು ರಸ್ತೆ ಬಗ್ಗೆ ಕಣ್ಣೀರಾಕಿದ್ರು. ನಮ್ಮ ಸರ್ಕಾರ ಬಂದ್ರೆ ಎಲ್ಲಾ ಸಮಸ್ಯೆ ಬಗೆಹರಿಸಲಾಗುವುದು ಎಂದಿದ್ದೆವು. 100 ರೂ.ಗೆ 10 ರೂ. ಆದ್ರೂ ಕೊಡಬಾರದಾ ಎಂದು ಇಕ್ಬಾಲ್​ ಪ್ರಶ್ನಿಸಿದ್ದಾರೆ.

Published on: Mar 14, 2026 04:42 PM
Follow Us