AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಮುಲ್ ಚುನಾವಣೆ: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಮನಬಂದಂತೆ ರೇಗಾಡಿದ ಕಾಂಗ್ರೆಸ್ ಶಾಸಕ ನಂಜೇಗೌಡ

ಕೋಮುಲ್ ಚುನಾವಣೆ: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಮನಬಂದಂತೆ ರೇಗಾಡಿದ ಕಾಂಗ್ರೆಸ್ ಶಾಸಕ ನಂಜೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 25, 2025 | 12:39 PM

Share

ಅಸಲು ವಿಷಯವೇನೆಂದರೆ, ನಂಜೇಗೌಡಬೂಡದಮಿಟ್ಟೆ, ಗೊಲ್ಲಹಳ್ಳಿ ಮತ್ತು ಎಂ ಕೊತ್ತೂರು ಹಾಲು ಉತ್ಪಾದಕ ಸಂಘಗಳ ಸದಸ್ಯರಾಗಿರುವ ಸುನಂದ, ನೇತ್ರಾವತಿ ಮತ್ತು ಗೀತಾ ಚುನಾವಣೆ ಸಮಯದಲ್ಲಿ ನಾಪತ್ತೆಯಾಗಿದ್ದು ಈ ಬಗ್ಗೆ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜ್ಞಾತ ಸ್ಥಳದಲ್ಲಿ ಅವರನ್ನು ಬಲವಂತದಿಂದ ಕೂಡಿಹಾಕಿರುವ ಸಾಧ್ಯತೆಯೂ ಇದೆ, ಹಾಗಾಗೇ ಬಸ್ಸಲ್ಲಿ ಮತದಾನಕ್ಕೆ ಬಂದ ಜನರನ್ನು ಪೊಲೀಸರು ಪ್ರಶ್ನಿಸಲು ಮುಂದಾಗಿದ್ದರು.

ಕೋಲಾರ, ಜೂನ್ 25: ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ (Karnataka police) ಕುಸಿಯುವುದಕ್ಕೆ ಅವರ ನೈತಿಕ ಬಲ ಕುಗ್ಗುವುದಕ್ಕೆ ಕಾರಣವೇನು ಅಂತ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಮಾಲೂರಿನ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಕೋಲಾರದ ಪದವಿ ಪೂರ್ವ ಕಾಲೇಜು ಮುಂದೆ ಪೊಲೀಸರನ್ನು ಮನಸ್ಸಿಗೆ ಬಂದಂತೆ ಹೀಯಾಳಿಸುತ್ತಿದ್ದಾರೆ. ಕೋಮುಲ್ ಚುನಾವಣೆ ಹಿನ್ನೆಲೆಯಲ್ಲಿ ನಂಜೇಗೌಡ 3 ಬಸ್​ಗಳಲ್ಲಿ ಜನರನ್ನು ಕರೆತಂದಿದ್ದಾರೆ. ಪೊಲೀಸರಿಗೆ ಕಾಣೆಯಾಗಿರುವ ಮತದಾರರ ಬಗ್ಗೆ ಬಸ್​ಗಳಿಂದ ಇಳಿದ ಮತದಾರರಿಂದ ಹೇಳಿಕೆ ಪಡೆಯಬೇಕಿತ್ತು. ಅವರು ತಮ್ಮ ಕರ್ತವ್ಯ ನಿರ್ವಹಿಸಲು ಹೋದಾಗ ನಂಜೇಗೌಡ ತಡೆಯುವುದರ ಜೊತೆಗೆ ಸಾರ್ವಜನಿಕವಾಗಿ ರೇಗಾಡಿದ್ದಾರೆ. ಪೊಲೀಸರ ನೆರವಿಗೆ ಸರ್ಕಾರವಂತೂ ಬರಲ್ಲ, ನ್ಯಾಯಾಲಯಗಳೇ ರಾಜಕಾರಣಿಗಳ ವಿರುದ್ಧ ಸುಮೋಟು ಪ್ರಕರಣಗಳನ್ನು ದಾಖಲಿಸಿಕೊಳ್ಳಬೇಕು.

ಇದನ್ನೂ ಓದಿ:  ಕೋಲಾರ ಹಾಲು ಒಕ್ಕೂಟದಲ್ಲಿ ಮತ್ತೊಂದು ಹಗರಣ ಆರೋಪ: ನೂರಾರು ಕೋಟಿ ರೂಪಾಯಿ ಡೀಸೆಲ್ ಅವ್ಯವಹಾರ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ