ಮೈಸೂರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪುನಃ ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜೈ ಎಂದರು!
ಅಭಿಮಾನಿಗಳಿಗೆ ಇದೊಂದು ರೊಟೀನ್ ಆಗಿಬಿಟ್ಟಿದೆ. ನಮಗೆ ಗೊತ್ತಿರುವಂತೆ ಹಾಗೆ ಘೋಷಣೆಗಳನ್ನು ಕೂಗಬೇಡಿ ಅಂತ ಸಿದ್ದರಾಮಯ್ಯ ಅಭಿಮಾನಿಗಳಿಗೆ ಹೇಳುವುದಿಲ್ಲ. ಅಂಥ ಘೋಷಣೆಗಳಿಂದ ಅವರು ಖುಷಿ ಪಡುವಂತೆ ಕಾಣುತ್ತದೆ.
Mysuru: ಮಾಜಿ ಮುಖ್ಯಮಂತ್ರಿ ಸಿದ್ದರಾಮಯನವರು (Siddaramaiah) ವಿಧಾನ ಪರಿಷತ್ ಸದಸ್ಯ ಡಾ ಡಿ ತಿಮ್ಮಯ್ಯ (Dr D Timmaiah) ಅವರ ಕಚೇರಿ ಉದ್ಘಾಟನೆಗೆಂದು ಮೈಸೂರಿಗೆ ಆಗಮಿಸಿದ್ದರು. ಅವರು ಜಲದರ್ಶಿನಿ ಅತಿಥಿಗೃಹ (guest house) ಆವರಣಕ್ಕೆ ಅಗಮಿಸಿ ಕಾರಿನಿಂದ ಇಳಿಯುತ್ತಿದ್ದಂತೆಯೇ ಅವರನ್ನು ಸುತ್ತುವರಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು, ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಯವಾಗಲಿ ಎಂದು ಕೂಗಲಾರಂಭಿಸಿದರು. ಅಭಿಮಾನಿಗಳಿಗೆ ಇದೊಂದು ರೊಟೀನ್ ಆಗಿಬಿಟ್ಟಿದೆ. ನಮಗೆ ಗೊತ್ತಿರುವಂತೆ ಹಾಗೆ ಘೋಷಣೆಗಳನ್ನು ಕೂಗಬೇಡಿ ಅಂತ ಸಿದ್ದರಾಮಯ್ಯ ಅಭಿಮಾನಿಗಳಿಗೆ ಹೇಳುವುದಿಲ್ಲ. ಅಂಥ ಘೋಷಣೆಗಳಿಂದ ಅವರು ಖುಷಿ ಪಡುವಂತೆ ಕಾಣುತ್ತದೆ.
ಇದನ್ನೂ ಓದಿ: ಕನ್ನಡಿಗರು ಸ್ಥಾಪಿಸಿದ ಬ್ಯಾಂಕ್ ಗಳನ್ನು ಮುಚ್ಚಿಸಿ ಪ್ರಧಾನಿ ಮೋದಿ ಕನ್ನಡಿಗರಿಗೆ ದ್ರೋಹ ಮಾಡಿದ್ದಾರೆ: ಸಿದ್ದರಾಮಯ್ಯ