Karnataka Assembly Polls; ಕೊರಟಗೆರೆಯಿಂದ ಮಾತ್ರ ಸ್ಪರ್ಧಿಸುತ್ತಿದ್ದೇನೆ, 2-ಕ್ಷೇತ್ರ ವದಂತಿ ಹೇಗೆ ಹುಟ್ಟಿತೋ ಗೊತ್ತಿಲ್ಲ: ಜಿ ಪರಮೇಶ್ವರ, ಶಾಸಕರು
ಹೈಕಮಾಂಡ್ ತನಗೆ ಕೊರಟೆಗೆರೆಯಿಂದ ಸ್ಪರ್ಧಿಸಲು ಈಗಾಗಲೇ ಟಿಕೆಟ್ ನೀಡಿದೆ, ತಾನು ಸಂತೃಪ್ತನಾಗಿರುವುದಾಗಿ ಪರಮೇಶ್ವರ್ ಹೇಳಿದರು.
ತುಮಕೂರು: ಹಿರಿಯ ಕಾಂಗ್ರೆಸ್ ನಾಯಕ ಜಿ ಪರಮೇಶ್ವರ (G Parameshwara) ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ವದಂತಿಯನ್ನು ತಳ್ಳಿಹಾಕಿದ್ದಾರೆ. ತುಮಕೂರಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಉಪಮುಖ್ಯಮಂತ್ರಿ, ತಾನ್ಯಾವತ್ತೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಮಾತಾಡಿಲ್ಲ, ಅದರ ಅವಶ್ಯಕತೆಯೂ ತನಗಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಕೊರಟೆಗೆರೆಯ (Koratagere) ಜನ ತನ್ನನ್ನು ಬಹಳ ಪ್ರೀತಿಯಿಂದ ನೋಡಿಕೊಂಡಿದ್ದಾರೆ, ಎರಡೆರಡು ಬಾರಿ ತನ್ನನ್ನು ಗೆಲ್ಲಿಸಿದ್ದಾರೆ. ತಾನು ಅವರನ್ನು ಬಿಟ್ಟು ಹೋಗುವ ಪ್ರಶ್ನೆಯೇ ಉದ್ಭವಿಸದು ಎಂದು ಪರಮೇಶ್ವರ ಹೇಳಿದರು. ಹೈಕಮಾಂಡ್ (high command) ತನಗೆ ಕೊರಟೆಗೆರೆಯಿಂದ ಸ್ಪರ್ಧಿಸಲು ಈಗಾಗಲೇ ಟಿಕೆಟ್ ನೀಡಿದೆ, ತಾನು ಸಂತೃಪ್ತನಾಗಿರುವುದಾಗಿ ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 08, 2023 04:05 PM