‘ಸಿನಿಮಾ ನನ್ನ ಉಸಿರು, ಜನ ನನ್ನ ಕೈ ಬಿಟ್ಟಿಲ್ಲ’ ಎಂದು ಮತ್ತೆ ಚಿತ್ರರಂಗಕ್ಕೆ ಬಂದ ಹುಚ್ಚ ವೆಂಕಟ್​

‘ಸಿನಿಮಾ ನನ್ನ ಉಸಿರು, ಜನ ನನ್ನ ಕೈ ಬಿಟ್ಟಿಲ್ಲ’ ಎಂದು ಮತ್ತೆ ಚಿತ್ರರಂಗಕ್ಕೆ ಬಂದ ಹುಚ್ಚ ವೆಂಕಟ್​

TV9 Web
| Updated By: ಮದನ್​ ಕುಮಾರ್​

Updated on: Jan 12, 2022 | 9:58 AM

ಹಲವು ರೀತಿಯಲ್ಲಿ ಗಮನ ಸೆಳೆದಿದ್ದ ನಟ ಹುಚ್ಚ ವೆಂಕಟ್​ ಅವರು ಒಂದಷ್ಟು ದಿನ ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಈಗ ಅವರು ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಲು ಸಜ್ಜಾಗಿದ್ದಾರೆ.

ನಟ ಹುಚ್ಚ ವೆಂಕಟ್​ (Huccha Venkat) ಅವರು ಸಿನಿಮಾರಂಗದಲ್ಲಿ ಏನಾದರೂ ಸಾಧಿಸಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಬಿಗ್​ ಬಾಸ್​ ಕಾರ್ಯಕ್ರಮಕ್ಕೂ ಹೋಗಿಬಂದರು. ಅನೇಕ ವಿವಾದಗಳನ್ನು ಅವರು ಮೈಮೇಲೆ ಎಳೆದುಕೊಂಡರು. ನಂತರ ಒಂದಷ್ಟು ದಿನ ಸೈಲೆಂಟ್​ ಆಗಿದ್ದ ಅವರು ಈಗ ಮತ್ತೆ ಬಂದಿದ್ದಾರೆ. ಬಣ್ಣದ ಲೋಕದಲ್ಲಿ ಮತ್ತೆ ಸಕ್ರಿಯರಾಗಲು ಅವರು ಪ್ರಯತ್ನಿಸುತ್ತಿದ್ದಾರೆ. ಸದ್ಯ ತಾವು ಮಾಡುತ್ತಿರುವ ಸಿನಿಮಾಗಳ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ‘ಎಸ್​. ನಾರಾಯಣ್​ ಅವರ ಪುತ್ರನ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದೇನೆ. ‘ತಿಕ್ಲ ಹುಚ್ಚ ವೆಂಕಟ್’​ ಎಂಬ ಸಿನಿಮಾ ಮಾಡಬೇಕು ಅಂದುಕೊಂಡಿದ್ದೇನೆ. ನಮ್ಮ ತಂದೆ ತೀರಿಕೊಂಡ್ರು. ಹಾಗಾಗಿ ಸ್ವಲ್ಪ ಗ್ಯಾಪ್​ ಆಯಿತು. ‘ಅಂತಿಮ ಸತ್ಯ’ ಅಂತ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದೇನೆ. ಇಂತಿಷ್ಟೇ ಕೊಡಿ ಅಂತ ಡಿಮ್ಯಾಂಡ್​ ಮಾಡಲ್ಲ. ಅವರ ಬಜೆಟ್​ಗೆ ತಕ್ಕಂತೆ ಸಿನಿಮಾ ಮಾಡುತ್ತೇನೆ’ ಎಂದು ಹುಚ್ಚ ವೆಂಕಟ್​ ಹೇಳಿದ್ದಾರೆ.

ಇದನ್ನೂ ಓದಿ:

‘ಕೋಪ ಕಡಿಮೆ ಮಾಡಿಕೊಂಡಿದೀನಿ, ಪ್ರೀತ್ಸೋರ ಮುಂದೆ ಮಗು ತರ ಆಗಿರ್ತೀನಿ’; ಹುಚ್ಚ ವೆಂಕಟ್

ಸೈನಾ ನೆಹ್ವಾಲ್​ ಬಗ್ಗೆ ಕೆಟ್ಟ ಜೋಕ್​: ಬಹಿರಂಗವಾಗಿ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದ ಸಿದ್ದಾರ್ಥ್​; ಪತ್ರ ವೈರಲ್​​