ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರದ ಕೌಂಟರ್​​ಗಳು ಓಪನ್ ಆಗಿವೆ, ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಲಿ: ವಿಜಯೇಂದ್ರ

Updated on: Jun 24, 2025 | 12:33 PM

ರಾಜ್ಯದ ಪರಿಸ್ಥಿತಿ ಬಹಳ ಗಂಭೀರವಾಗಿದೆ, ಸಿದ್ದರಾಮಯ್ಯ ಅವರಿಗೆ ನಾಡಿನ ಬಡವರ ಬಗ್ಗೆ ಸ್ವಲ್ಪವೂ ಗೌರವ ಮತ್ತು ಕಾಳಜಿಯಿಲ್ಲ, ಲೂಟಿ ನಡೆಯುತ್ತಿದ್ದರೂ ಅವರು ಸುಮ್ಮನೆ ಕೂತಿದ್ದಾರೆ ಅಂದರೆ ಏನರ್ಥ? ಸಿದ್ದರಾಮಯ್ಯ ತಾವೇ ಮುಂದಾಗಿ ರಾಜೀನಾಮೆ ಸಲ್ಲಿಸಬೇಕು ಇಲ್ಲವೇ ಮಾನ್ಯ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕೆಂದು ವಿಜಯೇಂದ್ರ ಹೇಳಿದರು.

ಬೆಂಗಳೂರು, ಜೂನ್ 24: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಮ್ಮ ಶಾಸಕರಾದ ಬಿಅರ್ ಪಾಟೀಲ್ ಹಾಗೂ ರಾಜು ಕಾಗೆ ಅವರನ್ನು ಕರೆಸಿ ಮುನಿಸು ಬಗೆಹರಿಸುವ ಬಗ್ಗೆ ಮಾತಾಡುತ್ತಾರೆ, ಅದರೆ ಭ್ರಷ್ಟಾಚಾರ ಎಲ್ಲ ಇಲಾಖೆಗಳನ್ನು ಮೆತ್ತಿಕೊಂಡಿದೆ ಮತ್ತು ಅಧಿಕಾರಿಗಳು ಕಲೆಕ್ಷನ್ ಕೌಂಟರ್​​ಗಳನ್ನು ತೆರೆದುಕೊಂಡು ಕೂತಿದ್ದಾರೆ ಎಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಇಲ್ಲಿ ತಿನ್ನಲು ಸಾಕಾಗುತ್ತಿಲ್ಲ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಲಿದ್ದಾರೆಯೇ? ಎಂದು ವಿಜಯೇಂದ್ರ ಮಾರ್ಮಿಕವಾಗಿ ಪ್ರಶ್ನಿಸಿದರು.

ಇದನ್ನೂ ಓದಿ:  ಅಮಿತ್ ಶಾ ಭೇಟಿ ಬಳಿಕ ಯಡಿಯೂರಪ್ಪ, ವಿಜಯೇಂದ್ರ ಚಟುವಟಿಕೆಗಳಲ್ಲಿ ಬದಲಾವಣೆ! ಕಾರಣ ಇಲ್ಲಿದೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ