ಕ್ಷಿಪ್ರ ಕ್ರಾಂತಿ ಬಿಜೆಪಿಯಲ್ಲಿ ನಡೆಯುತ್ತದೆ, ಕಾಂಗ್ರೆಸ್​ನಲ್ಲಿ ಅಲ್ಲ, ನಮ್ಮ ಸರ್ಕಾರ ಗಟ್ಟಿಯಾಗಿದೆ: ಸತೀಶ್ ಜಾರಕಿಹೊಳಿ

Updated on: Feb 28, 2025 | 8:35 PM

ಡಿಕೆ ಶಿವಕುಮಾರ್ ಖಾಸಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಲ್ಲಿ ತಪ್ಪೇನಿದೆ? ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಸರ್ಕಾರ ಬಿದ್ದುಹೋಗುತ್ತದೆ ಭಾವಿಸಬಾರದು, ಅವರು ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ, ಮತ್ತು ಸರ್ಕಾರವೂ ಬಿದ್ದು ಹೋಗಲ್ಲ, ಐದು ವರ್ಷಗಳ ಕಾಲ ಸಿದ್ದರಾಮಯ್ಯ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಾರೆ ಎಂದು ಸಚಿವ ಜಾರಕಿಹೊಳಿ ಹೇಳಿದರು.

ಚಿತ್ರದುರ್ಗ, ಫೆ 28: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ಆಗುತ್ತದೆ, ಸರ್ಕಾರ ಉರುಳಿ ಬೀಳುತ್ತದೆ ಎಂದು ಬಿಜೆಪಿ ನಾಯಕರು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಖಾತೆ ಸಚಿವ (PWD minister) ಸತೀಶ್ ಜಾರಕಿಹೊಳಿ, ಅವರು ತಮ್ಮ ಪಕ್ಷವನ್ನು ಕುರಿತು ಕಾಮೆಂಟ್ ಮಾಡಿರಬಹುದು, ಬಿಜೆಪಿಯಲ್ಲಿ ನಡೆಯುತ್ತಿರುವ ಒಳಜಗಳಗಳು ಯಾರಿಗೆ ಗೊತ್ತಿಲ್ಲ? ಆ ಪಕ್ಷದಲ್ಲೇ ಕ್ರಾಂತಿ ನಡೆಯಬಹುದು ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳಿಂದಾಗಿ ಕರ್ನಾಟಕ ಭಿಕ್ಷುಕ ರಾಜ್ಯವೇನೂ ಆಗಿಲ್ಲ, ತಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿದಂತೆ ಬಿಜೆಪಿ ಸಹ ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ನೀಡಿದೆ, ಯೋಜನೆಗಳಿಂದ ಬೊಕ್ಕಸ ಖಾಲಿಯಾಗಿಲ್ಲ, ಅದೊಂದು ರಾಜಕೀಯ ಹೇಳಿಕೆ ಅಷ್ಟೇ ಎಂದು ಜಾರಕಿಹೊಳಿ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ತಮ್ಮ ಅಧೀನದಲ್ಲಿರುವ ರಾಜಣ್ಣರನ್ನೇ ಕೆಪಿಸಿಸಿ ಕಾರ್ಯಾಧ್ಯಕ್ಷ ಕರೆಸಿ ಮಾತಾಡಬಹುದಿತ್ತು: ಸತೀಶ್ ಜಾರಕಿಹೊಳಿ