Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಮಪತ್ರ ಸಲ್ಲಿಸಲು ಕೇವಲ ಎರಡು ದಿನ ಇರುವಾಗ ಪಕ್ಷ ಬದಲಿಸಿದ ಯೋಗೇಶ್ವರ್ ರಣಹೇಡಿ: ಪುಟ್ಟರಾಜು

ನಾಮಪತ್ರ ಸಲ್ಲಿಸಲು ಕೇವಲ ಎರಡು ದಿನ ಇರುವಾಗ ಪಕ್ಷ ಬದಲಿಸಿದ ಯೋಗೇಶ್ವರ್ ರಣಹೇಡಿ: ಪುಟ್ಟರಾಜು

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 28, 2024 | 7:45 PM

ದುರಹಂಕಾರದ ಮಾತುಗಳನ್ನಾಡುತ್ತಿರುವ ಯೋಗೇಶ್ವರ್ ತಾನೆಂಥ ಹುತ್ತಕ್ಕೆ ಕೈ ಹಾಕಿದ್ದೇನೆ ಅಂತ ಮನವರಿಕೆಯಾಗಿಲ್ಲ, ಕಾಂಗ್ರೆಸ್ ಹುತ್ತದಲ್ಲಿ ಘಟಸರ್ಪಗಳಿವೆ, ಮುಂದೆ ಅವರ ಬಂಡವಾಳ ಗೊತ್ತಾಗಲಿದೆ, ಯೋಗೇಶ್ವರ್ ಮಾತಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಸಿಎಸ್ ಪುಟ್ಟರಾಜು ಹೇಳಿದರು.

ಮಂಡ್ಯ: ಬಹಳ ದಿನಗಳ ನಂತರ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಜೆಡಿಎಸ್ ನಾಯಕ ಮತ್ತು ಮಾಜಿ ಸಚಿವ ಸಿಎಸ್ ಪುಟ್ಟರಾಜು ಅವರು; ಸಿಪಿ ಯೋಗೇಶ್ವರ್, ಕುಮಾರಸ್ವಾಮಿಯನ್ನು ರಣಹೇಡಿ ಅಂತ ಹೇಳುತ್ತಾರೆ, ಅಸಲಿಗೆ ನಾಮಪತ್ರ ಸಲ್ಲಿಸಲು ಎರಡು ದಿನ ಮಾತ್ರ ಇರುವಾಗ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಸೇರಿದ ಯೋಗೇಶ್ವರ್ ಅವರೇ ರಣಹೇಡಿ, ಚನ್ನಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ನಾವು, ಕೇವಲ 17 ಕೆರೆಗಳಿಗೆ ನೀರು ತುಂಬಿಸಿ ಭಗೀರಥ ಅಂತ ಬೀಗುತ್ತಿರುವ ಯೋಗೇಶ್ವರ್ ಅಲ್ಲ, ಜನ ರೈತನಾಯಕ ಅಂತ ಒಪ್ಪಿಕೊಂಡಿರುವ ಹೆಚ್ ಡಿ ದೇವೇಗೌಡರು ಇಗ್ಲೂರ್ ಜಲಾಶಯ ಕಟ್ಟದಿದ್ದರೆ ಯೋಗೇಶ್ವರ್ ನೀರು ಎಲ್ಲಿಂದ ತರುತ್ತಿದ್ದರು ಎಂದು ಕೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  

Published on: Nov 28, 2024 07:43 PM