TB Dam: ತುಂಗಭದ್ರಾ ಜಲಾಶಯದ ಇತರ ಭಾಗಗಳಲ್ಲೂ ಗೋಚರಿಸುತ್ತಿರುವ ಬಿರುಕುಗಳು, ಜನರಲ್ಲಿ ಹೆಚ್ಚಿದ ಆತಂಕ!

| Updated By: Digi Tech Desk

Updated on: Aug 12, 2024 | 11:37 AM

ವಿರೋಧ ಪಕ್ಷದ ನಾಯಕರು ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಕಿತ್ತು ಬಂದಿರುವ ಮತ್ತು ಜಲಾಶಯ ಮೇಲ್ಭಾಗದಲ್ಲಿ ಅಲ್ಲಲ್ಲಿ ಬಿರುಕುಗಳು ಕಾಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಸಲಿಗೆ ಟಿಬಿ ಡ್ಯಾಂ ನಿಗಮದ ಅಧಿಕಾರಿಗಳನ್ನು ಇಲ್ಲಿ ಕಟಕಟೆಯಲ್ಲಿ ನಿಲ್ಲಿಸಬೇಕಾಗುತ್ತದೆ. ಕ್ರೆಸ್ಟ್ ಗೇಟ್ ಮುರಿದಿರುವ ಸಂಗತಿ ಅವರ ಗಮನಕ್ಕೆ ಬಂದಿಲ್ಲವೆಂದರೆ ಅದು ನಿಜಕ್ಕೂ ಆಘಾತಕಾರಿ ವಿಷಯ.

ಕೊಪ್ಪಳ: ತುಂಗಭದ್ರಾ ಜಲಾಶಯದ (ಟಿಬಿ ಡ್ಯಾಂ) 19ನೇ ಕ್ರೆಸ್ಟ್ ಗೇಟ್ ಕಿತ್ತು ಬಂದಿರುವ ಆತಂಕಕಾರಿ ಸಂಗತಿ ಉತ್ತರ ಕರ್ನಾಕದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಭೀತಿಯನ್ನು ಮೂಡಿಸಿರುವ ವಿಷಯ ರಾಜ್ಯದೆಲ್ಲೆಡೆ ಚರ್ಚೆಯಾಗುತ್ತಿದೆ. ವಸ್ತುಸ್ಥಿತಿಯ ವರದಿ ಮಾಡಲು ನಮ್ಮ ವರದಿಗಾರ ಜಲಾಶಯಕ್ಕೆ ತೆರಳಿದಾಗ ಗಾಬರಿ ಹುಟ್ಟಿಸುವ ಮತ್ತಷ್ಟು ಸಂಗತಿಗಳು ಬಯಲಿಗೆ ಬಂದಿವೆ. ಜಲಾಶಯಯ ಮೇಲ್ಭಾಗದಲ್ಲೂ ಹಲವೆಡೆ ಬಿರುಕುಗಳು ಕಾಣಿಸಿಕೊಂಡಿವೆ ಮತ್ತು ಕ್ರೆಸ್ಟ್ ಗೇಟ್ ಗಳನ್ನು ಅಳವಡಿಸಿರುವ ಜಾಗಗಳಲ್ಲೂ ಸಣ್ಣ ಸಣ್ಣ ಬಿರುಕುಗಳು ಗೋಚರಿಸುತ್ತಿವೆ ಎಂದು ವರದಿಗಾರ ಹೇಳುತ್ತಾರೆ. ಜಲಾಶಯದ ನಿರ್ವಹಣೆ ಟಿ ಬಿ ಡ್ಯಾಂ ನಿಗಮದ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.. ಆದರೆ, ಅವರು ಬೇಜವಾಬ್ದಾರಿಯ ಉತ್ತರಗಳನ್ನು ನೀಡುತ್ತಿದ್ದಾರಂತೆ. ಬೇಸಿಗೆ ಸಮಯದಲ್ಲಿ ದುರಸ್ತಿ ಕಾರ್ಯ ಮಾಡಲಾಗಿತ್ತು ಅಂತ ಅವರು ಹೇಳುವುದಾದರೆ ಬಿರುಕುಗಳು ಕಾಣಿಸುತ್ತಿರುವುದು ಯಾಕೆ? ಸರ್ಕಾರ ಮಧ್ಯಸ್ಥಿಕೆ ವಹಿಸುವ ಅವಶ್ಯಕತೆ ಸ್ಪಷ್ಟವಾಗಿ ಕಾಣುತ್ತಿದೆ, ಮತ್ತಷ್ಟು ಅನಾಹುತಗಳು ಜರುಗುವ ಮೊದಲು ಸಂಬಂಧಪಟ್ಟವರೆಲ್ಲ ಎಚ್ಚೆತ್ತುಕೊಳ್ಳಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ತುಂಗಭದ್ರಾ ಜಲಾಶಯ ಕ್ರಸ್ಟ್‌ ಗೇಟ್​ ಕಟ್: ಸರ್ಕಾರದ ವಿರುದ್ಧ ಮುಗಿಬಿದ್ದ ಪ್ರತಿಪಕ್ಷ ಬಿಜೆಪಿ

Published On - 11:21 am, Mon, 12 August 24

Follow us on