ಭಾರೀ ಮಳೆಯಿಂದಾಗಿ ಶ್ರೀಶೈಲಂ ಆಣೆಕಟ್ಟಿನ ಕ್ರೆಸ್ಟ ಗೇಟ್​ಗಳು ಓಪನ್, ನದಿ ಪಾತ್ರದಲ್ಲಿರುವ ಜನರಿಗೆ ಎಚ್ಚರದಿಂದಿರಲು ಸೂಚನೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 02, 2021 | 9:26 PM

ಚಿಂತೆಯ ವಿಷಯವೆಂದರೆ, ನದಿಪಾತ್ರದಲ್ಲಿರುವ ಊರುಗಳು ಪ್ರವಾಹದ ಭೀತಿಗೆ ಸಿಕ್ಕಿವೆ. ಕೆಳ ಪ್ರದೇಶದ ಹಲವಾರು ಗ್ರಾಮಗಳ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಆಗಲು ತಿಳಿಸಲಾಗಿದೆ.

ಈ ಡ್ಯಾಮ್ ಅನ್ನು ನೋಡಿ. ಕ್ರೆಸ್ಟ್ ಗೇಟ್​ಗಳ ಮೂಲಕ ರಭಸದಿಂದ ಹರಿದು ಬರುತ್ತಿರುವ ನೀರು ಈ ಭಾಗದಲ್ಲಿ ಮೇಘಗಳು ಹಾಲಿನ ಮಳೆ ಸುರಿಸುತ್ತಿವೆಯೋನೋ ಎಂಬ ಭಾವನೆ ಮೂಡಿಸುತ್ತವೆ. ಈ ದೃಶ್ಯ ನೋಡುವಾಗ ನಿಮಗೆ ಅಣ್ಣಾವ್ರ ಚಲಿಸುವ ಮೋಡಗಳು ಚಿತ್ರದ ಜೇನಿನ ಹೊಳೆಯೋ ಹಾಲಿನ ಮಳೆಯೋ.. ಹಾಡು ನೆನಪಾಗರಿಬಹುದು. ಸುಮಾರು 40 ವರ್ಷಗಳ ಹಿಂದೆ ಸಿಂಗೀತಂ ಶ್ರೀನಿವಾಸ್ ರಾವ್ ಅವರ ನಿರ್ದೇಶನ ಮತ್ತು ರಾಜನ್-ನಾಗೇಂದ್r ಅವರ ಸಂಗೀತ ಸಂಯೋಜನೆ ಮತ್ತು ಡಾ ರಾಜ್ ಕುಮಾರ್ ಅವರ ಸುಶ್ರಾವ್ಯ ಕಂಠದಲ್ಲಿ ಮೂಡಿಬಂದ ಈ ಹಾಡನ್ನು ಈಗಿನ ಯುವಪೀಳಿಗೆಯವರು ಸಹ ಗುನುಗುನಿಸುತ್ತಿರುತ್ತಾರೆ. ಹಾಡು ಮಾಡಿದ ಮೋಡಿ ಹಾಗಿದೆ.

ಆದರೆ ವಿಡಿಯೋದ ಹಿನ್ನೆಲೆಯನ್ನು ನಾವು ಗಮನಿಸಿದರೆ. ಹಾಡು ಹೇಳುವ ಮನಸ್ಸಾಗುವುದಿಲ್ಲ. ಈ ಆಣೆಕಟ್ಟು ಎಲ್ಲಿಯದು ನಿಮಗೆ ಗೊತ್ತಾಗಿರಬಹುದು. ಹೌದು, ನಿಮ್ಮ ಊಹೆ ನಿಜ. ಹೌದು ಕೃಷ್ಣಾ ನದಿಗೆ ಅಡ್ಡಲಾಗಿ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿರುವ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಶೈಲಂ ಹತ್ತಿರ ಕಟ್ಟಿರುವ ಡ್ಯಾಮ್ ಇದು. ಅಸಲಿಗೆ ವಿಷಯವೇನೆಂದರೆ, ಈ ಭಾಗದಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಸದರಿ ಡ್ಯಾಮ್ ಮತ್ತು ಪ್ರಕಾಶಂ ಬ್ಯಾರೇಜ್ ತುಂಬಿ ತುಳುಕುತ್ತಿವೆ. ಹಾಗಾಗೇ, ಹೆಚ್ಚುವರಿ ನೀರನ್ನು ವಿಡಿಯೋದಲ್ಲಿ ಕಾಣುತ್ತಿರುವ ಹಾಗೆ ಕ್ರೆಸ್ಟ್ಗೇಟ್ಗಳ ಮೂಲಕ ಹೊರಗೆ ಹರಿಬಿಡಲಾಗುತ್ತಿದೆ.

ಚಿಂತೆಯ ವಿಷಯವೆಂದರೆ, ನದಿಪಾತ್ರದಲ್ಲಿರುವ ಊರುಗಳು ಪ್ರವಾಹದ ಭೀತಿಗೆ ಸಿಕ್ಕಿವೆ. ಕೆಳ ಪ್ರದೇಶದ ಹಲವಾರು ಗ್ರಾಮಗಳ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಆಗಲು ತಿಳಿಸಲಾಗಿದೆ. ಈ ಬಾರಿಯ ಮಳೆಯ ಮರ್ಮ ಆರ್ಥವಾಗುತ್ತಿಲ್ಲ. ಕರ್ನಾಟಕದ ಹಲವಾರು ಭಾಗಗಳು ಸೇರಿದಂತೆ ದೇಶದೆಲ್ಲೆಡೆ ಪ್ರವಾಹ ಇಲ್ಲವೇ ಪ್ರವಾಹದಂಥ ಸ್ಥಿತಿ ತಲೆದೋರಿದೆ.

ಇದನ್ನೂ ಓದಿ: Viral Video: ಮದುವೆಗೆ ತಯಾರಾಗಲು ವರನಿಗೆ ಸಹಾಯ ಮಾಡುತ್ತಿರುವ ವಧು! ಇಬ್ಬರ ನವಿರಾದ ಕ್ಷಣದ ವಿಡಿಯೋ ವೈರಲ್