International Yoga Day 2023: ಯೋಗ ದಿನಾಚರಣೆಯಲ್ಲಿ ನಟಿ ಭಾವನಾ ಮತ್ತು ಮಾಜಿ ಕ್ರಿಕೆಟರ್ ವೆಂಕಟೇಶ್ ಪ್ರಸಾದ್ ಭಾಗಿ
ನಗರದ ಹಲವಾರು ಕಡೆಗಳಲ್ಲಿ ವಿಶ್ವಯೋಗ ದಿನ ಆಚರಿಸಲಾಗುತ್ತಿದೆ ಮತ್ತು ಬೇರೆ ಬೇರೆ ಕ್ಷೇತ್ರಗಳ ಗಣ್ಯರು ಅದರಲ್ಲಿ ಭಾಗವಹಿಸುತ್ತಿದ್ದಾರೆ.
ಬೆಂಗಳೂರು: ವಿಶ್ವದಾದ್ಯಂತ ಇಂದು ಯೋಗ ದಿನ ಆಚರಿಸಲಾಗುತ್ತಿದೆ (International Yoga Day). 600 ಶತಮಾನಗಳಿಂದ ಭಾರತೀಯ ಪರಂಪರೆಯ ಭಾಗವಾಗಿರುವ ಯೋಗಕ್ಕೆ ಅಂತರಾಷ್ಟ್ರೀಯ ಮನ್ನಣೆ ಸಿಕ್ಕಿದ್ದು 8 ವರ್ಷಗಳ ಹಿಂದೆ, 2015 ರಲ್ಲಿ. ನಿಮಗೆ ನೆನಪಿದೆ, 2015 ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆ (UN) ಮಾನ್ಯತೆ ನೀಡಿತು. ನಮ್ಮ ಪುರಾತನ ಪರಂಪರೆಗೆ ವಿಶ್ವಮನ್ನಣೆ ಸಿಗುವಂತಾಗಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಪ್ರಯತ್ನದಿಂದ. ಇಂದು ನಗರದ ಹಲವಾರು ಕಡೆಗಳಲ್ಲಿ ವಿಶ್ವಯೋಗ ದಿನ ಆಚರಿಸಲಾಗುತ್ತಿದೆ ಮತ್ತು ಬೇರೆ ಬೇರೆ ಕ್ಷೇತ್ರಗಳ ಗಣ್ಯರು ಅದರಲ್ಲಿ ಭಾಗವಹಿಸುತ್ತಿದ್ದಾರೆ. ವಿಧಾನ ಸೌಧದ ಅವರಣದಲ್ಲಿ ಯೋಗಾಚರಣೆ ನಡೆಯುತ್ತಿದ್ದು ಖ್ಯಾತ ಕ್ರಿಕೆಟರ್ ವೆಂಕಟೇಶ್ ಪ್ರಸಾದ್ ಮತ್ತು ಚಿತ್ರನಟಿ ಹಾಗೂ ಕಾಂಗ್ರೆಸ್ ನಾಯಕಿ ಭಾವನಾ ಪಾಲ್ಗೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Latest Videos