Loading video

ವಿಜಯೇಂದ್ರರನ್ನು ಟೀಕಿಸಿದರೆ ಪಕ್ಷದ ರಾಷ್ಟ್ರೀಯ ನಾಯಕರನ್ನು ಟೀಕಿಸಿದಂತೆ: ಎಂಪಿ ರೇಣುಕಾಚಾರ್ಯ

|

Updated on: Nov 27, 2024 | 4:30 PM

ರೇಣುಕಾಚಾರ್ಯ ಸಹ ಕೆಲ ಮಾಜಿ ಶಾಸಕರನ್ನು ಜೊತೆಗೆ ಕರೆದುಕೊಂಡು ಯತ್ನಾಳ್ ತಂಡದ ಸದಸ್ಯರಿಗೆ ದೇವರು ಬುದ್ಧಿ ನೀಡಲಿ ಅಂತ ನವೆಂಬರ್ 29ರಿಂದ ಒಂದು ಅಭಿಯಾನ ನಡೆಸುತ್ತಿದ್ದಾರೆ. ಇವರ ತಂಡವು ಮಾಜಿ ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮನೆಯಿಂದ ಹೊರಟು ಮುಳುಬಾಗಿಲು ಕುರುಡುಮಲೈ ಗಣೇಶನ ದೇವಸ್ಥಾನಕ್ಕೆ ತೆರಳಿ ದೇವರ ಆಶೀರ್ವಾದ ಪಡೆದು ಅಲ್ಲಿಂದ ಮೈಸೂರಿಗೆ ತೆರಳಲಿದೆ.

ಬೆಂಗಳೂರು: ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಿಜಯಪುರದ ಶಾಸಕ ಮತ್ತು ವಕ್ಫ್ ವಿರುದ್ಧ ಹೋರಾಟ ನಡೆಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಮರ ಸಾರಿದಂತಿದೆ. ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಯತ್ನಾಳ್ ಟೀಕಿಸುವುದು ಸರಿಯಲ್ಲ, ಸೋತವರು ಮತ್ತು ಟಿಕೆಟ್ ಸಿಗದ 4-5 ಜನನ್ನು ಜೊತೆಗಿಟ್ಟುಕೊಂಡು ಅವರು ಹೋರಾಟ ಅಂತ ಮಾಡುತ್ತಿದ್ದಾರೆ, ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದು ರಾಷ್ಟ್ರೀಯ ನಾಯಕರು ಹಾಗಾಗಿ ವಿಜಯೇಂದ್ರರನ್ನು ಟೀಕಿಸುವುದು ವರಿಷ್ಠರನ್ನು ಟೀಕಿಸಿದಂತೆ, ಯಡಿಯೂರಪ್ಪ ಅವರು ಬಿಜೆಪಿಯನ್ನು ಕಟ್ಟಿ ಬೆಳೆಸುವಾಗ ಇವರಲ್ಲಿ ಯಾರೂ ಕಣ್ಣು ಬಿಟ್ಟಿರಲಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ